ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಾಧನೆ, ಹಣ, ಅಂತಸ್ತು ಮಾಡಿಕೊಂಡು ಅವನಲ್ಲಿ ಅಹಂ ಏನಾದರೂ ಬಂದರೆ ಅದು ಆತನನ್ನು ಪಾತಳಕ್ಕೆ ಎಳೆದುಕೊಂಡು ಹೋಗುತ್ತದೆ. ಮನುಷ್ಯನಲ್ಲಿ ಸೇವಾ ಮನೋಭಾವ ಇದ್ದು, ಯಾರೇ ಬಂದರೂ ಪ್ರೀತಿ, ವಿಶ್ವಾಸ ಮತ್ತು ತಾಳ್ಮೆ ಎಂಬುದನ್ನು ಮೈಗೂಡಿಸಿಕೊಂಡರೆ ಮುಂದಿನ ದಾರಿ ಉತ್ತಮವಾಗಿರುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ 2024-25 ನೇ ಸಾಲಿನ ನೂತನ ಅಧ್ಯಕ್ಷೆ ಡಾ. ತನುಜಾ ಕಿವಿಮಾತು ಹೇಳಿದರು.ನಗರದ ಸಮೀಪ ಹೊಸಕೊಪ್ಪಲುನಲ್ಲಿರುವ ಆರ್ಯಾ ಮಾನ್ಸನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಇನ್ನರ್ ವೀಲ್ ಕ್ಲಬ್
ಆಫ್ ಹಾಸನ್ ಗೋಲ್ಡ್ ನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ನಲ್ಲಿ ಬಂದಾಗಯಾವತ್ತಾದರೂ ಒಂದು ದಿನ ಅಧ್ಯಕ್ಷೆಯಾಗಿ ಲೀಡರ್ ಶಿಫ್ ತೆಗೆದುಕೊಳ್ಳುವ ಆಶಯವಿತ್ತು. ನನ್ನ ಆಶಯದಂತೆ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಯೋಜನೆ ರೂಪಿಸುತ್ತಾ ಜನರಿಗೆ
ಸೇವೆ ಮಾಡುವ ಆಶಯ ಇಟ್ಟುಕೊಂಡಿದ್ದೇನೆ ಎಂದರು.ಸೇವೆ ಮಾಡುವುದರ ಮೂಲಕವೇ ನಮ್ಮ ಇನ್ನರ್ ವೀಲ್ ಕ್ಲಬ್ ಅನ್ನು ಎತ್ತರಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ. ನಮ್ಮ ಈ ಉತ್ತಮ ಕೆಲಸಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರ ಅವಶ್ಯಕವಾಗಿದೆ ಎಂದು ತಿಳಿಸಿದರು.
ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಜಿಲ್ಲಾ ಚೇರ್ಮನ್ ವೈಶಾಲಿ ವಿ. ಕೊಡ್ವಾ ಅವರು ತಮ್ಮ ಅಧ್ಯಕ್ಷೆ ನುಡಿಯಲ್ಲಿ, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಸಂಸ್ಥೆ ಹುಟ್ಟಿಕೊಂಡಿರುವುದು ಸೇವೆ ಮಾಡುವುದಕ್ಕಾಗಿ ಮಾತ್ರ. ಸೇವೆಯಿಂದಲೇ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯ. ಈ ಸಂಸ್ಥೆಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿ, ಈಗ ಅವರು ಅಧಿಕಾರ ವಹಿಸಿಕೊಂಡಿದ್ದು, ಮುಂದೆ ಬಡವರು, ಸಮಸ್ಯೆ ಎದುರಿಸುತ್ತಿರುವವರಿಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ತೇಜೋಧಯ ನಿರಾಶ್ರಿತರ ಆಶ್ರಮ ನಡೆಸುತ್ತಿರುವ ಗಿರಿತೇಜ ಅವರ ನೆರವಿಗಾಗಿ ಒಂದು ಕ್ವಿಂಟಲ್ ಅಕ್ಕಿ,
ಮೊಟ್ಟೆ ಹಾಗೂ ಧನ ಸಹಾಯ ಮಾಡಲಾಯಿತು.ನಂತರ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಭರತನಾಟ್ಯ ಕಲಾವಿದೆಯನ್ನು ಕೂಡ ಸನ್ಮಾನಿಸಲಾಯಿತು ಹಾಗೂ ಈ ವೇದಿಕೆಯಲ್ಲಿ ಏಳು ಜನ ಹೊಸ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ 2023-24ರ ನಿರ್ಗಮಿತ ಅಧ್ಯಕ್ಷೆ ಡಿ.ಆರ್. ನಳಿನಿ, ಕಾರ್ಯದರ್ಶಿ ಎಂ.ವೈ. ವೇದಾ ಶಿವಕುಮಾರ್, ನೂತನ ಕಾರ್ಯದರ್ಶಿ ವನಿತಾ , ಚಾರ್ಟರ್ ಪ್ರೆಸಿಡೆಂಟ್ ರತಿ, ಜಿಲ್ಲಾ ಮಾಜಿ ಗೌರ್ನರ್ ಗೋವರ್ಧನ್, ರಮೇಶ್, ರೋಟರಿ ಸದಸ್ಯರಾದ ಜಲಂಧರ್, ಸಂತೋಷ್, ಪ್ರದೀಪ್, ಮೋಹನ್, ಎಸ್.ಡಿ.ಎಂ. ಕಾಲೇಜಿನ ಗುರುಬಸವರಾಜು, ಪೂಜಾ ರಘುನಂದನ್, ಚಂದ್ರಿಕಾ ಮಹೇಶ್, ರಘು ನಂದನ್ ಸೇರಿ ಇತರರು ಪಾಲ್ಗೊಂಡಿದ್ದರು.