ಸೇವಾ ಭಾವ ಬೆಳೆಸಿಕೊಳ್ಳಬೇಕು: ವರ್ಷ ಉಸ್ವಾಲ್

| Published : Jun 20 2024, 01:11 AM IST

ಸೇವಾ ಭಾವ ಬೆಳೆಸಿಕೊಳ್ಳಬೇಕು: ವರ್ಷ ಉಸ್ವಾಲ್
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರು ನಿಸ್ವಾರ್ಥ ಸೇವೆ, ಭಾತೃತ್ವ, ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮುಂಬೈ ಆರ್‌ಬಿಐ ಜನರಲ್ ಮ್ಯಾನೇಜರ್ ನಿರಂಕಾರ ತತ್ವ ಪ್ರಚಾರಕಿ ವರ್ಷ ಉಸ್ವಾಲ್ ಹೇಳಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಯುವಕರು ನಿಸ್ವಾರ್ಥ ಸೇವೆ, ಭಾತೃತ್ವ, ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮುಂಬೈ ಆರ್‌ಬಿಐ ಜನರಲ್ ಮ್ಯಾನೇಜರ್ ನಿರಂಕಾರ ತತ್ವ ಪ್ರಚಾರಕಿ ವರ್ಷ ಉಸ್ವಾಲ್ ಹೇಳಿದರು.

ನಗರದ ಹೊರವಲಯದ ಮಂಟೂರ ರಸ್ತೆಯಲ್ಲಿರುವ ಸಂತ ನಿರಂಕರಿ ಭವನದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ನಡೆದ ರಾಜ್ಯಮಟ್ಟದ ಸತ್ಸಂಗ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂತ ನಿರಂಕಾರಿ ಮಿಷನ್ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ಸೇವಾಭಾವ ಬೆಳೆಸುವ ಸಂಸ್ಥೆಯಾಗಿದೆ, ಸತ್ಯ, ಪ್ರೇಮ ಮತ್ತು ಏಕತ್ವದಲ್ಲಿ ನಂಬಿಕೆ ಇರುವ ಎಲ್ಲರಿಗೂ ಇಲ್ಲಿ ಸ್ವಾಗತವಿದೆ ಎಂದರು.ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಕ, ಯುವತಿಯರು ಸಂಗೀತ, ನಾಟಕ , ಕಾವ್ಯ, ವಾಚನ ಹಾಗೂ ಹಾಡುಗಳ ಮೂಲಕ ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಿಂಬಿಸಿದರು.

ರಾಜ್ಯ ನಿರಂಕರಿ ಮಿಷನ್ ಸಂಚಾಲಕ ಸುನಿಲ್ ರಾತ್ರಾ ಮಾತನಾಡಿ, ತಮ್ಮ ಮಿಷನ್ ಮೂಲಕ ದೇಶದ ತುಂಬ ಸಮಾಜ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಕೊರೋನಾ ಸಂಕಷ್ಟದ ಕಾಲದಲ್ಲಿ ನಿರಂಕಾರಿ ಮಿಷನ್ ಕಾರ್ಯಕರ್ತರು ಉತ್ತಮ ಸೇವೆ ಸಲ್ಲಿಸಿದರು ಎಂದು ಹೇಳಿದರು.

ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ರನ್ನ ಮಹಾಕವಿಯ ಕಾವ್ಯ ಮತ್ತು ಮುಧೋಳ ನಗರದ ಹಿರಿಮೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಸಾಧಕರು ಭಾಗವಹಿಸಿದ್ದರು.