ಸಾರಾಂಶ
ಮನುಷ್ಯರಿಗೆ ಮಾನಸಿಕ ನೆಮ್ಮದಿ ಸಿಗಬೇಕಾದರೆ ದೇವಸ್ಥಾನಗಳಿಗೆ ಪ್ರತಿನಿತ್ಯ ಹೋಗಬೇಕು, ದೇವಸ್ಥಾನಗಳಲ್ಲಿ ಸ್ವಚ್ಛತೆ ಅತಿ ಮುಖ್ಯವಾಗಿದೆ.
ನರಸಿಂಹರಾಜಪುರ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಪ್ರತಿ ವರ್ಷವೂ ಶ್ರದ್ಧಾ ಕೇಂದ್ರ, ಶಾಲೆ, ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಎಂದು ಧ.ಗ್ರಾ.ಯೋಜನೆಯ ಕುದುರೆಗುಂಡಿ ವಲಯ ಮೇಲ್ವಿಚಾರಕ ಎನ್.ಬಿ.ಸಿದ್ದಲಿಂಗಪ್ಪ ತಿಳಿಸಿದರು.
ಅವರು ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಗರಮಕ್ಕಿ ಒಕ್ಕೂಟದ ಕಮಲಾಪುರ ಗಣಪತಿ ದೇವಸ್ಥಾನ ಹಾಗೂ ಕುದುರೆಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯರಿಗೆ ಮಾನಸಿಕ ನೆಮ್ಮದಿ ಸಿಗಬೇಕಾದರೆ ದೇವಸ್ಥಾನಗಳಿಗೆ ಪ್ರತಿನಿತ್ಯ ಹೋಗಬೇಕು, ದೇವಸ್ಥಾನಗಳಲ್ಲಿ ಸ್ವಚ್ಛತೆ ಅತಿ ಮುಖ್ಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.ನಾಗರಮಕ್ಕಿ ಒಕ್ಕೂಟದ ಸೇವಾ ಪ್ರತಿನಿಧಿ ಪ್ರಕಾಶ, ಒಕ್ಕೂಟದ ಅಧ್ಯಕ್ಷ ಮನೋಹರ್, ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಗಿರೀಶ, ಈಶ್ವರ, ರತ್ನಾಕರ, ರವಿ, ಹೇಮಾವತಿ, ಪದ್ಮಾವತಿ, ಒಕ್ಕೂಟದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.