ಜಾಗತಿಕ ಇಂಧನ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಸಂಸ್ಥೆ ಶ್ನೇಯ್ಡರ್ ಎಲೆಕ್ಟ್ರಿಕ್‌ ಸಂಸ್ಥೆ ಕೈಗಾರಿಕಾ ವಲಯದ ವಿದ್ಯುತ್ ಉಪಕರಣಗಳ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸುವ ನಿಟ್ಟಿನಲ್ಲಿ ವಿನೂತನ ಸರ್ವೀಸಸ್ ಎಕ್ಸ್‌ಪ್ರೆಸ್ ಸಂಚಾರಿ ಇನ್ನೋವೇಶನ್ ಹಬ್ ಎಂಬ ವಿನೂತನ ಪ್ರಯತ್ನ ಆರಂಭಿಸಿದ್ದು, ಈ ಯೋಜನೆಯ ಭಾಗವಾಗಿ ಸಂಸ್ಥೆಯ ಸಂಚಾರಿ ಇನ್ನೋವೇಷನ್ ಹಬ್ ಶೀಘ್ರದಲ್ಲೇ ಮಂಗಳೂರಿಗೆ ಆಗಮಿಸಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಬೆಂಗಳೂರಿನಿಂದ ಆರಂಭವಾಗಿರುವ ಈ ವಿಶೇಷ ಸಂಚಾರಿ ಘಟಕ, ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಮಂಗಳೂರಿಗೂ ಭೇಟಿ ನೀಡಲಿದೆ.

ದೇಶದಾದ್ಯಂತ ಲಕ್ಷಾಂತರ ಕೈಗಾರಿಕಾ ಹಾಗೂ ವಾಣಿಜ್ಯ ವಿದ್ಯುತ್ ಉಪಕರಣಗಳು ಇಂದಿಗೂ ಅಧಿಕೃತವಾಗಿ ನೋಂದಣಿಯಾಗದೆ ಉಳಿದಿವೆ. ಇದರಿಂದಾಗಿ ಅವುಗಳ ಸೂಕ್ತ ಮೇಲ್ವಿಚಾರಣೆ, ಕಾಲಮಿತಿಯ ನಿರ್ವಹಣೆ ಮತ್ತು ದೀರ್ಘಕಾಲೀನ ಬಾಳಿಕೆಯಲ್ಲಿ ತೊಂದರೆ ಉಂಟಾಗುತ್ತಿದೆ. ಯಂತ್ರಗಳು ಅನಿರೀಕ್ಷಿತವಾಗಿ ಕೈಕೊಟ್ಟು ಉತ್ಪಾದನೆ ಸ್ಥಗಿತಗೊಳ್ಳುವುದನ್ನು ತಪ್ಪಿಸಲು, ಮುನ್ಸೂಚನೆ ಆಧಾರಿತ ಮುನ್ನೆಚ್ಚರಿಕೆ ವಹಿಸಲು ಹಾಗೂ ಉಪಕರಣಗಳ ಗರಿಷ್ಠ ಕಾರ್ಯಕ್ಷಮತೆ ಕಾಪಾಡಿಕೊಳ್ಳಲು ಸಂಸ್ಥೆಗಳು ತಮ್ಮ ಸಾಧನಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಶ್ನೇಯ್ಡರ್ ಎಲೆಕ್ಟ್ರಿಕ್ ಕರೆ ನೀಡಿದೆ.

ಡೇಟಾ ಸೆಂಟರ್‌ಗಳು, ಬಂದರು ಆಧಾರಿತ ಕೈಗಾರಿಕೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಪವರ್ ಗ್ರಿಡ್‌ಗಳಿಗೆ ಅಗತ್ಯವಿರುವ ಪರಿಹಾರಗಳು ಈ ವಾಹನದಲ್ಲಿರಲಿವೆ. ಶೀಘ್ರದಲ್ಲೇ ಈ ವಾಹನ ಪ್ರಮುಖ ಕೈಗಾರಿಕಾ ವಲಯಗಳಿಗೆ ಭೇಟಿ ನೀಡಲಿದೆ.