ಸಾರಾಂಶ
- ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಕುಪ್ಪೇಲ್ಲೂರು ಸಿದ್ದಾರೂಢ ಮಠದ ಪ್ರಿಯಾನಂದ ಸ್ವಾಮೀಜಿ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಕ್ತಿ, ಪ್ರೀತಿಯಿಂದ ಮಾಡುವ ಎಲ್ಲ ಕೆಲಸಗಳು ದೇವರಿಗೆ ಸಮರ್ಪಿತವಾಗುತ್ತವೆ. ಇದೇ ರೀತಿ ನಿರಂತರ ಸಾಧನೆ, ಯಶಸ್ಸುಗಳು ಕೂಡ ಸಾಧಕನ ಸ್ವತ್ತಾಗುತ್ತವೆ ಎಂದು ಕುಪ್ಪೇಲ್ಲೂರು ಸಿದ್ದಾರೂಢ ಮಠದ ಪ್ರಿಯಾನಂದ ಸ್ವಾಮೀಜಿ ನುಡಿದರು.ತಾಲೂಕಿನ ಯಕ್ಕನಹಳ್ಳಿಯಲ್ಲಿ ಬುಧವಾರ ಗ್ರಾಮದ ಶ್ರೀ ಮಾಯಾಂಬಿಕಾ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 9ನೇ ವರ್ಷದ ಭರತ ಹುಣ್ಣಿಮೆ ಶ್ರೀ ದೇವಿಯ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಹಾಲುಮತ ಸಮಾಜದ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀ ಮಾಯಾಂಬಿಕಾ ದೇವಿ ಕೂಡ ಶಕ್ತಿದೇವತೆಯ ರೂಪವಾಗಿದೆ. ನಂಬಿದ ಭಕ್ತರನ್ನು ಮಾತೃಸ್ವರೂಪಿಣೆಯಾಗಿ ಆಶೀರ್ವದಿಸುವ ದೇವಿಯಾಗಿದ್ದಾಳೆ. ಇಂತಹ ದೇವಿ ಉತ್ಸವವನ್ನು ಗ್ರಾಮದಲ್ಲಿ ಒಗ್ಗಟ್ಟಾಗಿ ಆಚರಿಸುತ್ತಿರುವುದು ಯಕ್ಕನಹಳ್ಳಿ ಜನರ ಉತ್ತಮ ಸಂಸ್ಕಾರಕ್ಕೆ ಉದಾಹರಣೆಯಾಗಿದೆ ಎಂದರು.ಮುಖ್ಯ ಅತಿಥಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಶ್ರೀ ಮಾಯಾಂಬಿಕಾ ದೇವಿ ಸಮುದಾಯ ಭವನಕ್ಕಾಗಿ ಶಾಸಕರೊಂದಿಗೆ ಮಾತನಾಡಿ ಅನುದಾನ ಮಂಜೂರು ಮಾಡಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಸನ್ಮಾನ ಸ್ವೀಕರಿಸಿದ ಎಂ.ಜಯಪ್ಪ ಬೆಂಗಳೂರು ಮಾತನಾಡಿ, ಸಮಾಜ ಅಥವಾ ವರ್ಗ ಅಭಿವೃದ್ಧಿ ಹೊಂದಬೇಕಾದರೆ ಮೂಲಭೂತವಾಗಿ ಉತ್ತಮ ಶಿಕ್ಷಣ ಮುಖ್ಯವಾಗುತ್ತದೆ ಎಂದರು.ತುಮಕೂರು ಜಯಪ್ಪ ಮಾತನಾಡಿದರು. ನಿವೃತ್ತ ನೌಕರರಾದ ಕೆ.ಬಸಪ್ಪ, ಡಿ.ಆರ್. ಬೀರಲಿಂಗಪ್ಪ,ಕೆ.ಎಸ್.ಮಹೇಶ್ವರಪ್ಪ, ಮಹಾಲಿಂಗಪ್ಪ, ಮಹೇಶ್ವರಪ್ಪ ಸಾರಥಿ, ಬಿ.ಐ.ಸಣ್ಣಸಿದ್ದಪ್ಪ, ಕೆ.ಬಸಪ್ಪ, ಸಿ.ಪಿ.ಬಸವರಾಜಪ್ಪ, ಚಂದ್ರಪ್ಪ, ಜಯಪ್ಪ ಮಾಕನೂರು, ರುದ್ರಪ್ಪ, ಕೆ.ಜಿ.ಬಸವರಾಜಪ್ಪ, ಯಲ್ಲಪ್ಪ, ಮಂಜಪ್ಪ, ಹಳದಪ್ಪ, ರಾಜಪ್ಪ,ಕೆ.ಕತಜಿ. ರೇವಣಸಿದ್ದಪ್ಪ ಹಾಲೆಕಲ್ಲು, ಯಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿರ್ದೇಶಕರಾದ ಎಸ್. ಶಿವಪ್ರಕಾಶ್,ಮತ್ತು ಕೆ.ಎಸ್.ಶಿವಪ್ರಕಾಸ್ ಗೂ ಇತರರನ್ನು ಸನ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಹಂಚಿನಮನೆ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ಮಾಜಿ ಅದ್ಯಕ್ಷ ಕೆಂಗಲಹಳ್ಳಿ ಷಣ್ಮುಖಪ್ಪ, ತಾ.ಕುರುಬ ಸಮಾಜದ ಗೌರವಾಧ್ಯಕ್ಷ ಮರುಳಸಿದ್ದಪ್ಪ, ಬಿ.ಸಿ.ಎಂ. ಉಪಾಧ್ಯಕ್ಷ ಎಚ್.ಎ.ಉಮಾಪತಿ, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.ಗ್ರಾಮದ ಯುವ ಮುಖಂಡ ಅಶೋಕ್ ಉದ್ದಜ್ಜಾರ ಪ್ರಾಸ್ತಾವಿಕವಾಗಿ ಮಾಡಿದರು. ಶಿಕ್ಷಕ ಮಂಜುನಾಥ್ ನಿರೂಪಿಸಿ, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ದೊಡ್ಡ ರಂಗಪ್ಪ, ಸತೀಶ್ ಉದ್ದಜ್ಜಾರ, ವೈ.ಕೆ. ದಯಾನಂದ್, ಗ್ರಾಮ ಮುಖಂಡರು ಇದ್ದರು. ಸಾಮೂಹಿಕ ಭಂಡಾರ ಕಾರ್ಯಕ್ರಮ, ದೇವಿಯ ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ ನಡೆಯಿತು.
- - - -12ಎಚ್.ಎಲ್.ಐ1:ಕಾರ್ಯಕ್ರಮವನ್ನು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಂಚಿನಮನೆ ರುದ್ರಪ್ಪ ನೆರವೇರಿಸಿದರು. ಪ್ರಿಯಾನಂದ ಸ್ವಾಮಿಜಿ, ಇತರ ಗಣ್ಯರು ಇದ್ದರು.
;Resize=(128,128))
;Resize=(128,128))
;Resize=(128,128))