ಸಾರಾಂಶ
ನರಗುಂದ: ಸಮಾಜದಲ್ಲಿ ತೊಂದರೆಯಲ್ಲಿರುವ ಮನುಷ್ಯ ಸಹಾಯಕ್ಕೆ ಅನುಕೂಲ ಆಗುವನೆ ನಿಜವಾದ ಸೇವಕನೆಂದು ಕವಿ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿ ಹೇಳಿದರು. ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರದ ಲೋಕಾರ್ಪಣೆ ನಿಮಿತ್ತ 17ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಪರರ ಸೇವೆ ಪರಮಾತ್ಮನ ಸೇವೆ, ನೊಂದವರ ಬೆಂದವರ ಧ್ವನಿಯಾಗಿ ಸೇವೆ ಸಲ್ಲಿಸುವುದು ನಿಜವಾದ ಶಿವನ ಸೇವೆ. ಹೀಗೆ ಕಲ್ಯಾಣದಲ್ಲಿ ಶರಣರ ಸಮೂಹ ಕೂಡತೊಡಗಿತು. ಸಮಾಜವಾದದ ಸಮಸಮ ಸಿದ್ಧಾಂತ ಬೇರು ಮುಂದಿನ ದಿನಮಾನಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ಸಾಧ್ಯವಾಯಿತು. ಹೀಗೆ ಕೂಡಿದ ಬಹಳಷ್ಟು ಶರಣರು ಪ್ರತಿನಿತ್ಯದ ಅನುಭವದ ನುಡಿಗಳನ್ನು ಸಾಮಾಜಿಕ ಬದ್ಧತೆ ಶಕ್ತಿಯಂತೆ ವಚನಗಳನ್ನು ರಚಿಸ ತೊಡಗಿದರು. ಅಂದು ರಚಿಸಿದ ವಚನಗಳೇ ಇಂದಿನ ಸಂವಿಧಾನದ ಮೂಲ ಬೇರುಗಳಾಗಿವೆ ಎಂದರು. ಬಸವಣ್ಣವರು 12ನೇ ಶತಮಾನದಲ್ಲಿ ಸಮಾಜದ ಕೆಳವರ್ಗದ ಜನರ ಕಷ್ಟಗಳಿಗೆ ಸ್ಪಂದಿಸಿ, ಅವರಿಗೆ ಬಂದಿರುವ ಕಷ್ಟಗಳನ್ನು ದೂರ ಮಾಡಲು ಪಾಲುದಾರರು ಆಗುತ್ತಿದ್ದರು. ಆಗಾಗಿ ನಾವು ಇಂದಿನ ದಿನಗಳಲ್ಲಿ ನಮ್ಮಲ್ಲಿ ಎಷ್ಟೇ ಸಂಪತ್ತು ಇರಲು ನಾವು ಸಮಾಜದಲ್ಲಿ ನೊಂದವರಗೆ ಧ್ವನಿಯಾಗಿ ಸೇವೆ ಮಾಡಿದರೆ ಅದಕ್ಕಿಂತ ದೊಡ್ಡ ಸೇವೆ ಬೇರೊಂದಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ಶೆಲ್ಲಿಕೇರಿ, ನಾಗನಗೌಡ ತಿಮ್ಮನಗೌಡ್ರ, ನಾಗಾಲೋಟಮಠ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ.ನಧಾಪ್, ಹನುಮಂತ ಕಾಡಪ್ಪನವರು, ಪ್ರಾಚಾರ್ಯ ಬಿ.ಆರ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.