ಸಾರಾಂಶ
ಪ್ರಪಂಚದಲ್ಲಿ ಮನುಷ್ಯ ಸಾತ್ವಿಕ ಸುಖಕ್ಕಾಗಿ ಭಗವಂತನ ಪ್ರಾರ್ಥನೆ ಮಾಡುವುದು ಅಗತ್ಯ
ನರಗುಂದ: ಲೌಕಿಕ ಪ್ರಪಂಚದ ಸಾತ್ವಿಕ ಸುಖಕ್ಕಾಗಿ ಭಗವಂತನ ಸೇವೆ ಮಾಡುವುದು ಅಗತ್ಯ ಎಂದು ಬನಹಟ್ಟಿ ಶ್ರೀ ರುದ್ರೇಶ್ವರ ಮಠದ ಸೋಲಬಯ್ಯ ಶ್ರೀಗಳು ಹೇಳಿದರು.
ಪಟ್ಟಣದ ಸೋಮಾಪುರ ಬಡಾವಣೆಯ ಶ್ರೀನಾಗಲಿಂಗ ನಿಲಯದಲ್ಲಿ 41ನೇ ವರ್ಷದ ಅಜಾತ ಶ್ರೀ ನಾಗಲಿಂಗ ಮಹಾಸ್ವಾಮಿಗಳ ಪುರಾಣ ಪ್ರವಚನದ ಅಂಗವಾಗಿ ಶ್ರೀ ನಾಗಲಿಂಗ ಮಹಾಸ್ವಾಮಿಗಳ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಪಂಚದಲ್ಲಿ ಮನುಷ್ಯ ಸಾತ್ವಿಕ ಸುಖಕ್ಕಾಗಿ ಭಗವಂತನ ಪ್ರಾರ್ಥನೆ ಮಾಡುವುದು ಅಗತ್ಯ. ಬನಹಟ್ಟಿಯ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಮತ್ತು ಶ್ರೀನಾಗಲಿಂಗ ಮಹಾಸ್ವಾಮಿಗಳ ಆಧ್ಯಾತ್ಮಿಕ ಒಡನಾಟ, ಅವರ ಪವಾಡ ನಾವು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಭೀಮಣ್ಣ ಶಾಸ್ತ್ರಿಗಳು, ರಾಮಚಂದ್ರ ಬಡಿಗೇರ, ಗಾಯತ್ರಿ ಮಹಿಳಾ ಮಂಡಳದ ಪದಾಧಿಕಾರಿಗಳು, ಮೌನೇಶ ಪತ್ತಾರ, ಶಂಕರಪ್ಪ ಬಡಿಗೇರ, ರಾಜು ಆಚಾರ್ಯ, ಮಹೇಶ ಬಡಿಗೇರ, ಆನಂದ ಮುರಾಳ, ಪ್ರಸಾದ ಕೆಂಚರಡ್ಡಿ, ರಮೇಶ ಮಿಕಲಿ, ಅಭಿಲಾಷ ಬಾಳಿಗೇರಿ ಇದ್ದರು.