ದೇಶದ ಮೇಲೆ ನಿರಂತರ ದಾಳಿಯ ನಂತರವೂ ಸುಭದ್ರ ಭಾರತದ ವೈಭವ ಉತ್ತುಂಘಕ್ಕೇರಬೇಕಾದರೆ ಶೃದ್ಧಾ ನಿಷ್ಠೆವುಳ್ಳ ಸೈನಿಕರ ತ್ಯಾಗ ಬಲಿದಾನದಿಂದ ಮಾತ್ರ ಸಾಧ್ಯವಾಗಿದೆ.

ಕಲಘಟಗಿ:

ಒಂದು ಸುರಕ್ಷಿತ ಸುಭದ್ರ ದೇಶವನ್ನು ಕಟ್ಟಲು ಆ ದೇಶದ ಸೈನಿಕರಿಂದ ಮಾತ್ರ ಸಾಧ್ಯ. ಆದ್ದರಿಂದ ಇಂದಿನ ಯುವಕರು ದೇವರ ಸೇವೆಗಿಂತ ಹೆಚ್ಚಾಗಿ ದೇಶ ಸೇವೆ ಮಾಡಬೇಕು ಎಂದು ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಹನ್ನೆರಡು ಮಠದ ಸಭಾಭವನದಲ್ಲಿ ಆಯೋಜಿಸಿದ್ದ ತಾಲೂಕು ಮಾಜಿ ಮತ್ತು ಹಾಲಿ ಸೈನಿಕರ ಸಂಘ ಉದ್ಘಾಟಿಸಿ ಮಾತನಾಡಿದರು.ದೇಶದ ಮೇಲೆ ನಿರಂತರ ದಾಳಿಯ ನಂತರವೂ ಸುಭದ್ರ ಭಾರತದ ವೈಭವ ಉತ್ತುಂಘಕ್ಕೇರಬೇಕಾದರೆ ಶೃದ್ಧಾ ನಿಷ್ಠೆವುಳ್ಳ ಸೈನಿಕರ ತ್ಯಾಗ ಬಲಿದಾನದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಜಾನಪದ ವಿದ್ವಾಂಸ ಮಲ್ಲಯ್ಯ ಸ್ವಾಮಿ ತೋಟಗಂಟಿ ಮಾತನಾಡಿ, ನಮ್ಮ ತಾಲೂಕಿನಲ್ಲಿಯೂ ಕೂಡ ಅನೇಕ ಸೈನಿಕರು ಭಾರತ ದೇಶ ಸೇವೆಯ ಕೂಡುಗೆ ನೀಡಿದ್ದು ನೂರಾರು ಸೈನಿಕರನ್ನು ದೇಶಕ್ಕಾಗಿ ನೀಡಿದ ಹೆಮ್ಮೆ ನಮ್ಮ ತಾಲೂಕಿನದ್ದಾಗಿದೆ ಎಂದರು.

ಸಂಘದ ಅಧ್ಯಕ್ಷ ಶಿವಪುತ್ರಯ್ಯ ತೇಗುರಮಠ ಮಾತನಾಡಿ, ದೇಶ ಸೇವೆ ಸಲ್ಲಿಸಿದ ಅನೇಕ ಮಾಜಿ ಹಾಗೂ ಹಾಲಿ ಸೈನಿಕರ ಆರ್ಥಿಕ ಪರಿಸ್ಥಿತಿ ಕುರಿತು ಅವರ ಕುಟುಂಬದ ಏಳ್ಗೆ ಮಕ್ಕಳ ಶಿಕ್ಷಣದ ಕುರಿತು ಸಂಘದಲ್ಲಿ ಯೋಜನೆಗಳನ್ನು ರೂಪಿಸಲು ಸಂಘವನ್ನು ಸ್ಥಾಪಿಸಲಾಗಿದೆ ಎಂದರು.

ಮಕ್ಕಳಿಂದ ಭರತನಾಟ್ಯ ಪ್ರದರ್ಶಿಸಲಾಯಿತು. ದೇಶಸೇವೆ ಸಲ್ಲಿಸಿದ ನಿವೃತ್ತ ಸೈನಿಕರಿಗೆ ಸನ್ಮಾನಿಸಲಾಯಿತು. ಈ ಸಂರ್ಭದಲ್ಲಿ ಶಿವಾಜಿ ವಾಘ್ಮೋಡೆ, ಬಸನಗೌಡ ಪಾಟೀಲ, ವೃಷಬೇಂದ್ರ ಪಟ್ಟಣಶೆಟ್ಟಿ, ಎಸ್.ವಿ. ತಡಸಮಠ, ಮಾಜಿ ಹಾಗೂ ಹಾಲಿ ಸೈನಿಕರು ಇದ್ದರು.