ಕುಷ್ಟಗಿ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ನಿರ್ಗತಿಕರ ಸೇವೆ ಮಾಡುವದು ಇನ್ನರ್‌ ವೀಲ್‌ ಕ್ಲಬ್‌ನ ಮುಖ್ಯ ಧ್ಯೇಯವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ 316 ಡಿಸ್ಟ್ರೀಕ್ಟ್ ಚೇರಮನ್ ಜಯಶ್ರೀ ಸಾಗರ್‌ ಹೇಳಿದರು.

ತಾಲೂಕಿನ ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ನಿರ್ಮಿಸಿದ ಹ್ಯಾಪಿ ಸ್ಕೂಲ್ ಉದ್ಘಾಟಿಸಿ ನಂತರ ಕುಷ್ಟಗಿ ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇನ್ನರ್ ವೀಲ್ ಕ್ಲಬ್ ಪದಾಧಿಕಾರಿ ಹಾಗೂ ಸದಸ್ಯರು ಹಣ ಹೂಡಿಕೆ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿರುವ ಶಾಲೆ ಆಯ್ಕೆ ಮಾಡಿಕೊಂಡು ಶಾಲೆಗೆ ಅವಶ್ಯವಿರುವ ಕುಡಿಯುವ ನೀರು, ಗಾರ್ಡನ್, ಗೋಡೆಗಳಿಗೆ ಪೇಂಟಿಂಗ್ ಮಾಡಿಸುವದು,ಸಾಮಗ್ರಿ ಕೊಡಿಸುವದು, ಲೈಬ್ರರಿ, ವಿಜ್ಞಾನ ಪರಿಕರ, ಆಟದ ಪರಿಕರ , ಕಪಾಟು, ಕರ್ಟನ್ಸ್, ವಿವಿಧ ಸಾಮಗ್ರಿ ವಿತರಿಸಿ ಹ್ಯಾಪಿ ಸ್ಕೂಲ್ ಮಾಡಲಾಗುತ್ತದೆ ಎಂದರು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಗಿರೀಜಾ ಮಾಲಿಪಾಟೀಲ ಮಾತನಾಡಿ, ನಾನು ಅಧ್ಯಕ್ಷೆಯಾಗಿ ಮಾಡಿದ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಎಲ್ಲ ಸದಸ್ಯರು ಸಹಕಾರ ನೀಡಿದ್ದಕ್ಕೆ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಡಿಸ್ಟ್ರೀಕ್ಟ್ ಇಎಸ್ಓ ಡಾ.ಪಾರ್ವತಿ ಪಳೋಟಿ, ಇನ್ನರ್ ವೀಲ್ ಕ್ಲಬ್ ಉಪಾದ್ಯಕ್ಷೆ ಶಾರದಾ ಶೆಟ್ಟರ್‌, ಕಾರ್ಯದರ್ಶಿ ಶಾರದಾ ಚಟ್ಟೇರ, ಕಾವೇರಿ ಕುಂದರಗಿ, ಪ್ರಭಾ ಬಂಗಾರಶೆಟ್ಟರ್‌, ಶ್ರೀದೇವಿ ಮಸ್ಕಿಮಠ, ದೀಪಾ ವೈಜಾಪೂರು, ಚಿತ್ರಾ ಕಂದಕೂರು, ಪ್ರೇಮಾ ಪಾಟೀಲ, ಬಸವರಾಜೇಶ್ವರಿ ಪಾಟೀಲ, ಶಶಿಕಲಾ ಕುಡತಿನಿ, ಡಾ.ಕುಮುದಾ, ಸುದೀಪ್ತಾ ಕಾಖಂಡಕಿ, ಶರಣಮ್ಮ ಅಂಗಡಿ, ದೀಪಾ ಹುಣಸಿಹಾಳ, ಡಾ.ವೇದಾ ಪಾಟೀಲ, ಶಿಲ್ಪಾ ಸುಂಕದ, ಶಾರದಾ ಜಿಗಜಿನ್ನಿ,ಶಾರದಾ ಕಟ್ಟಿಮನಿ, ಗಿರಿಜಾ ಚಿನಿವಾಲರ, ಶೋಭಾ ಕಂದಕೂರು, ಗಿರಿಜಾ ನಾಗೂರು, ತಬಶುಂ,ನಿರ್ಮಲಾ ಪುರದ ಸೇರಿದಂತೆ ಅನೇಕರು ಇದ್ದರು.