ಎಸ್‌ಇಎಸ್ ವಿದ್ಯಾಮಂದಿರ ಪಪೂ ಕಾಲೇಜಿಗೆ ಶೇ. ೯೬.೪೫

| Published : Apr 10 2025, 01:02 AM IST

ಸಾರಾಂಶ

ಪಟ್ಟಣದ ಎಸ್.ಇ.ಎಸ್. ವಿದ್ಯಾಮಂದಿರದ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. ೯೬.೪೫ ಫಲಿತಾಂಶ ಲಭಿಸಿದೆ.

ಕನ್ನಡಪ್ರಭ ವಾರ್ತೆ ಸಂಡೂರು

ಪಟ್ಟಣದ ಎಸ್.ಇ.ಎಸ್. ವಿದ್ಯಾಮಂದಿರದ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. ೯೬.೪೫ ಫಲಿತಾಂಶ ಲಭಿಸಿದೆ.

ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು:

ವಾಣಿಜ್ಯ ವಿಭಾಗದಲ್ಲಿ ದೀಪಾ ಎಂ. ೫೭೧ ಅಂಕ, ಕಲಾ ವಿಭಾಗದಲ್ಲಿ ಐಶ್ವರ್ಯ ಎಲ್. ೫೮೬ ಅಂಕ ಹಾಗೂ ವಿಜ್ಞಾನ ವಿಭಾಗದಲ್ಲಿ ಜೀವಿತಾ ಎ. ೫೬೫ ಅಂಕ ಗಳಿಸಿ ಆಯಾ ವಿಭಾಗಗಳಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ. ೯೫.೯೩ ಫಲಿತಾಂಶ:ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರದ ೧೨೩ ವಿದ್ಯಾರ್ಥಿಗಳಲ್ಲಿ ೧೧೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ೧೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, ೯೪ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ೧೨ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ. ೯೯.೦೫ ಫಲಿತಾಂಶ:

ಪರೀಕ್ಷೆಗೆ ಹಾಜರಾದ ೧೦೬ ವಿದ್ಯಾರ್ಥಿಗಳಲ್ಲಿ ೧೦೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ೧೯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, ೭೪ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೧೨ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಶೇ ೯೩.೮೨ ಫಲಿತಾಂಶ:

ಪರೀಕ್ಷೆಗೆ ಕುಳಿತ ೮೧ ವಿದ್ಯಾರ್ಥಿಗಳಲ್ಲಿ ೭೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ೭ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, ೬೧ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ೮ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿವೇಕಾನಂದ ಸರ್ಕಾರಿ ಪಪೂ ಕಾಲೇಜು ಕಲಾ ವಿಭಾಗದಲ್ಲಿ ತಾಲೂಕಿಗೆ ಪ್ರಥಮ:

ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ. 64.5 ಆಗಿದ್ದು, ಕಲಾ ವಿಭಾಗದಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಪ್ರಾಚಾರ್ಯ ಸಣ್ಣನೀಲಪ್ಪ ತಿಳಿಸಿದ್ದಾರೆ.ದಾಕ್ಷಾಯಿಣಿ ಬಡಿಗೇರ ಶೇ. 86.19, ಮಾಲತೇಶ ಮಾಟ್ನರ ಶೇ. 85.5, ಡಿಸ್ಟಿಂಕ್ಷನ್ ಪಡೆದಿದ್ದಾರೆ. ಕೆ.ಜೆ. ವಿದ್ಯಾ ಶೇ.83,ಅರುಣ ಗಾಣದ ಶೇ.81, ದಕ್ಷತಾ ಸೆರೆಗಾರ ಶೇ.81, ಪುಷ್ಪಲತಾ ಬಳ್ಳಾರಿ ಶೇ.80 ಗಳಿಸಿದ್ದಾರೆ.

ಪ್ರಥಮ-13, ದ್ವಿತೀಯ -7, ತೃತೀಯ -1 ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಾಲೇಜಿನ ಇಂಗ್ಲಿಷ್ ವಿಭಾಗದ ಫಲಿತಾಂಶ ಶೇ.74.2 ರಷ್ಟಾಗಿದೆ.