ಸಾರಾಂಶ
ಸೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆಲಂಚ ಸ್ವೀಕಾರ: ಚಂದ್ರಶೇಖರ್ ನ್ಯಾಯಂಗ ಬಂಧನಕ್ಕೆ
ಲಂಚ ಸ್ವೀಕಾರ: ಚಂದ್ರಶೇಖರ್ ನ್ಯಾಯಂಗ ಬಂಧನಕ್ಕೆ ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯುತ್ ಪರಿವರ್ತಕ ಬದಲಾಯಿಸಲು ಲಂಚ ಪಡೆಯುತ್ತಿದ್ದ ಹಲಗೂರು ಸೆಸ್ಕಾಂ ಕಿರಿಯ ಎಂಜಿನಿಯರ್ ಚಂದ್ರಶೇಖರ್‌ನನ್ನು ಬುಧವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಲಿಂಗಪಟ್ಟಣ ಗ್ರಾಮದ ರೈತ ಪುಟ್ಟಸ್ವಾಮಿ ತಮ್ಮ ಜಮೀನಿನಲ್ಲಿ ಹಾಕಲಾಗಿದ್ದ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದ್ದು, ಇದನ್ನು ಬದಲಾಯಿಸಿ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಿ ಕೊಡಬೇಕೆಂದು ಸೆಸ್ಕಾಂ ಕಿರಿಯ ಎಂಜಿನಿಯರ್ ಚಂದ್ರಶೇಖರ್ ಅವರಲ್ಲಿ ಕೋರಿದ್ದರು.ಹೊಸ ವಿದ್ಯುತ್ ಪರಿವರ್ತಕ ಬದಲಿಸಲು ₹4500 ಹಣ ಲಂಚ ಕೊಡುವಂತೆ ಚಂದ್ರಶೇಖರ್ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಮನನೊಂದ ರೈತ ಪುಟ್ಟಸ್ವಾಮಿ ಮಂಡ್ಯ ಲೋಕಾಯುಕ್ತ ಕಚೇರಿಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.
ಬುಧವಾರ ಮಧ್ಯಾಹ್ನ ಸೆಸ್ಕಾಂ ಶಾಖಾಧಿಕಾರಿ ಕಚೇರಿಯಲ್ಲಿ ರೈತ ಪುಟ್ಟಸ್ವಾಮಿ ಅವರಿಂದ ಜೆಇ ಚಂದ್ರಶೇಖರ್ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್.ಪಿ ವಿ.ಸುಜೀತ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ. 13ಕೆಎಂಎನ್ ಡಿ17ಚಂದ್ರಶೇಖರ್