ಗಣೇಶೋತ್ಸವ ಮೂರ್ತಿಗಳ ವಿಸರ್ಜನೆಗೆ ಸ್ಥಳ ನಿಗದಿ

| Published : Sep 07 2024, 01:34 AM IST

ಸಾರಾಂಶ

ಮಹಾನಗರ ಪಾಲಿಕೆ ವತಿಯಿಂದ ಸೆಪ್ಟೆಂಬರ್ 7 ಮತ್ತು 9ರಂದು ಶ್ರೀ ಗಣೇಶ ಮೂರ್ತಿಗಳ ತಾತ್ಕಾಲಿಕ ವಿಸರ್ಜನೆಗೆ ಆಯ್ದ ಸ್ಥಳಗಳಲ್ಲಿ ಟ್ರ್ಯಾಕ್ಟರ್ ನಿಲುಗಡೆ ಮಾಡಿ, ವಿಸರ್ಜನೆ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಭಕ್ತರು ಈ ವ್ಯವಸ್ಥೆ ಸದ್ಬಳಕೆ ಮೂಲಕ ನಗರದಲ್ಲಿ ಸ್ವಚ್ಛತೆ, ಜಲಮೂಲಗಳ ರಕ್ಷಣೆಗೆ ಸ್ಪಂದಿಸಲು ಕೋರಲಾಗಿದೆ.

- ಸೆ.7, 9ರಂದು ಗಣಪತಿ ಮೂರ್ತಿಗಳ ವಿಸರ್ಜನೆಗೆ ಪಾಲಿಕೆಯಿಂದ ಟ್ರ್ಯಾಕ್ಟರ್‌ಗಳಲ್ಲಿ ವ್ಯವಸ್ಥೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಸೆಪ್ಟೆಂಬರ್ 7 ಮತ್ತು 9ರಂದು ಶ್ರೀ ಗಣೇಶ ಮೂರ್ತಿಗಳ ತಾತ್ಕಾಲಿಕ ವಿಸರ್ಜನೆಗೆ ಆಯ್ದ ಸ್ಥಳಗಳಲ್ಲಿ ಟ್ರ್ಯಾಕ್ಟರ್ ನಿಲುಗಡೆ ಮಾಡಿ, ವಿಸರ್ಜನೆ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಭಕ್ತರು ಈ ವ್ಯವಸ್ಥೆ ಸದ್ಬಳಕೆ ಮೂಲಕ ನಗರದಲ್ಲಿ ಸ್ವಚ್ಛತೆ, ಜಲಮೂಲಗಳ ರಕ್ಷಣೆಗೆ ಸ್ಪಂದಿಸಲು ಕೋರಲಾಗಿದೆ.

ಹಗೆದಿಬ್ಬ ವೃತ್ತ, ಗಾಂಧಿನಗರ, ರಾಜಕುಮಾರ ಶಾಲೆ, ಕುರುಬರ ಕೇರಿ ಮೈಲಾರಲಿಂಗೇಶ್ವರ ದೇವಸ್ಥಾನ ಹತ್ತಿರ ಕೊಂಡಜ್ಜಿ ರಸ್ತೆ, ಕೋರ್ಟ್ ಹಿಂಭಾಗ, ದೇವರಾಜ ಅರಸು ಬಡಾವಣೆ ಶಿವಾಜಿ ವೃತ್ತ, ದುರ್ಗಾಂಬಿಕ ದೇವಸ್ತಾನದ ಹತ್ತಿರ ಕುರುಬರ ಕೇರಿ. ಹೊಂಡದ ವೃತ್ತ, ವೆಂಕಟೇಶ್ವರ ವೃತ್ತ, ಬೇತೂರು ರಸ್ತೆ, ವಿಠಲ ಮಂದಿರ ಹತ್ತಿರ, ಮಹಾರಾಜ ಪೇಟೆ. ಹಾಸಬಾವಿ ವೃತ್ತ, ಚೌಕಿಪೇಟೆ. ಪಾರ್ಕ್ ಹತ್ತಿರ, 3ನೇ ಮುಖ್ಯ ರಸ್ತೆ, ವಿನೋಬನಗರ ರಾಮ್ ಆಂಡ್ ಕೋ ಸರ್ಕಲ್.

ಪಿ.ಜಿ.ಬಡಾವಣೆ ಬಸವೇಶ್ವರ ವೃತ್ತ, ಕಾಯಿಪೇಟೆ ಗಣೇಶ ಹೋಟೆಲ್ ಹತ್ತಿರ, ಬಂಬೂ ಬಜಾರ್ ಬನ್ನಿಮರದ ಹತ್ತಿರ, ರಿಂಗ್ ರಸ್ತೆ, ಎಸ್.ಎಸ್ ಲೇಔಟ್. ಬಕೇಶ್ವರ ಸ್ಕೂಲ್ ಮುಂಭಾಗ, ಎಂ.ಸಿ.ಸಿ ಎ. ಬ್ಲಾಕ್, ಜಯದೇವ ವೃತ್ತ, ಕೆ.ಬಿ.ಬಡಾವಣೆ. ಡಿ.ಸಿ.ಎಂ ಲೇಔಟ್ ಸರ್ಕಲ್, ಡಿಸಿಎಂ ಲೇಔಟ್ ಸರ್ಕಾರಿ ಶಾಲೆ ಹತ್ತಿರ, ಅವರಗೆರೆ ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ, ಸರಸ್ವತಿ ಬಡಾವಣೆ. ಸಂಜೀವಿನಿ ಆಂಜನೇಯ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆ, ದುರ್ಗಾಂಬಿಕಾ ದೇವಸ್ಥಾನದ ಹತ್ತಿರ, ನಿಟುವಳ್ಳಿ, ಎಚ್.ಕೆ.ಆರ್. ಸರ್ಕಲ್, ನಿಟ್ಟುವಳ್ಳಿ ಡಾಂಗೆ ಪಾರ್ಕ್.

ಕೆಟಿಜಿ ನಗರ. ಬಾಪೂಜಿ ಶಾಲೆ ಹತ್ತಿರ, ಕುವೆಂಪು ನಗರ. ಗುಂಡಿ ಮಹಾದೇವಪ್ಪ ಸರ್ಕಲ್, ಎಂ.ಸಿ.ಸಿ. ಎ ಬ್ಲಾಕ್, ಈಶ್ವರ ಪಾರ್ವತಿ ದೇವಸ್ಥಾನದ ಹತ್ತಿರ, ವಿದ್ಯಾನಗರ, ಆಂಜನೇಯ ದೇವಸ್ಥಾನದ ಹತ್ತಿರ, ಆಂಜನೇಯ ಬಡಾವಣೆ. ಬಾಪೂಜಿ ಬ್ಯಾಂಕ್ ಹತ್ತಿರ, ಬಿ.ಐ.ಇ.ಟಿ. ರಸ್ತೆ, ಆಂಜನೇಯ ಬಡಾವಣೆ. ಶ್ರೀರಾಮ ಮಂದಿರದ ಹತ್ತಿರ, ಶಾಮನೂರು ಆಂಜನೇಯ ದೇವಸ್ಥಾನದ ಹತ್ತಿರ, ಹಳೇ ಕುಂದುವಾಡ. ಈ ಸ್ಥಳಗಳಲ್ಲಿ ವಿಸರ್ಜನೆ ಮಾಡಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

- - -(ಗಣೇಶ ಮೂರ್ತಿ)

ಸಾಂದರ್ಭಿಕ ಚಿತ್ರ