ಎಸ್ಸೆಸ್ಸೆಎಲ್ಸಿ ತೇರ್ಗಡೆಗೆ 33 ಅಂಕ ನಿಗದಿ ಶೈಕ್ಷಣಿಕ ಪ್ರಗತಿಗೆ ಮಾರಕ

| Published : Jul 26 2025, 12:00 AM IST

ಎಸ್ಸೆಸ್ಸೆಎಲ್ಸಿ ತೇರ್ಗಡೆಗೆ 33 ಅಂಕ ನಿಗದಿ ಶೈಕ್ಷಣಿಕ ಪ್ರಗತಿಗೆ ಮಾರಕ
Share this Article
  • FB
  • TW
  • Linkdin
  • Email

ಸಾರಾಂಶ

10ನೇ ತರಗತಿ ತೇರ್ಗಡೆಗೆ ಕನಿಷ್ಠ 33 ಅಂಕ ನಿಗದಿ ಮಾಡುವುದು ಶಿಕ್ಷಣ ಇಲಾಖೆಯ ನೀತಿ ಶೈಕ್ಷಣಿಕ ಪ್ರಗತಿಗೆ ದೌರ್ಭಾಗ್ಯವಾಗಲಿದೆ ಎಂದು ಹಿರಿಯ ರಾಜಕೀಯ ಧುರೀಣ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು 10ನೇ ತರಗತಿ ತೇರ್ಗಡೆಗೆ ಕನಿಷ್ಠ 33 ಅಂಕ ನಿಗದಿ ಮಾಡುವುದು ಶಿಕ್ಷಣ ಇಲಾಖೆಯ ನೀತಿ ಶೈಕ್ಷಣಿಕ ಪ್ರಗತಿಗೆ ದೌರ್ಭಾಗ್ಯವಾಗಲಿದೆ ಎಂದು ಹಿರಿಯ ರಾಜಕೀಯ ಧುರೀಣ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ವಿರೋಧ ವ್ಯಕ್ತಪಡಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ 10ನೇ ತರಗತಿ ಪಾಸ್ ಆಗಲು ಕನಿಷ್ಠ 33 ಅಂಕಗಳು ನಿಗದಿಗೆ ಇಲಾಖೆ ಸಾರ್ವಜನಿಕರಿಂದ ಅಭಿಪ್ರಾಯ ಕೇಳಿದೆ. ಶಿಕ್ಷಣ ಇಲಾಖೆ ಈ ನೀತಿ ಮಕ್ಕಳ ಗುಣಾನಾತ್ಮಕ ಕಲಿಕೆಗೆ ಅಪಾಯಕಾರಿಯಾಗಲಿದೆ. ಈ ಹಿಂದೆ 100ಕ್ಕೆ ಲಿಖಿತವಾಗಿ 35 ಅಂಕಗಳು ಇದ್ದವು ಅದನ್ನು ಬದಲಿಸಿ 20 ಆಂತರಿಕ ಅಂಕ ನಿಗದಿ ಮಾಡಿ 80ಕ್ಕೆ 15 ಲಿಖಿತ ಅಂಕಗಳು ಪಡೆದರೆ ಪಾಸ್ ಮಾಡುತ್ತಿದ್ದರು. ಇದನ್ನು ಬದಲಿಸಿ ಶಿಕ್ಷಣ ಇಲಾಖೆ ಈಗ 33 ಅಂಕಗಳು ನಿಗದಿ ಮಾಡಿದರೆ ಹೇಗೆ ಎಂದು ಅಭಿಪ್ರಾಯ ಕೇಳಿದೆ. ಈ ಕುರಿತು ನಾನು ಶಿಕ್ಷಣ ಚಿಂತಕರು, ತಜ್ಞರು ಹಾಗೂ ಪಾಲಕರೊಂದಿಗೆ ಚರ್ಚಿಸಿದಾಗ ವಿರೋಧವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ಇದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕೆಂದು ಹೇಳಿದರು.ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶೈಕ್ಷಣಿಕ ನೀತಿ ಬದಲಿಸುತ್ತಾ ಹೋದರೆ, ಮಕ್ಕಳಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗುವ ಜೊತೆಗೆ ಶಿಕ್ಷಕರಿಗೆ ಕಲಿಸುವ ಇಚ್ಛಾಶಕ್ತಿ ಉಳಿಯುವುದಿಲ್ಲ. ಇದು ಗುಣಾನಾತ್ಮಕ ಶಿಕ್ಷಣಕ್ಕೆ ಕೊಡಲಿ ಪೆಟ್ಟು ನೀಡಲಿದೆ. ನಮ್ಮ ಶಿಕ್ಷಣದ ಹೇಗಿದೆ ಎನ್ನುವ ಕುರಿತು ಇತ್ತಿಚೀಗೆ ಜಿಲ್ಲೆಯೊಂದರ 10ನೇ ತರಗತಿಯ ಮಕ್ಕಳಲ್ಲಿ 10 ಸಾವಿರ ಮಕ್ಕಳಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ ಎಂದು ಆ ಜಿಲ್ಲೆಯ ಡಿಡಿಪಿಐ ಹೇಳಿದ್ದ ವಾಸ್ತವಾಗಿದೆ. ಇದನ್ನು ಮನಗಂಡು ಸರ್ಕಾರ ಈ ಕುರಿತು ಚರ್ಚಿಸಲು ಮುಕ್ತ ಅವಕಾಶ ನೀಡಿದೆ ಶಿಕ್ಷಣ ಇಲಾಖೆ 33 ಅಂಕಗಳಿಗೆ 10ನೇ ತರಗತಿ ಪಾಸ್ ಮಾಡಲು ಮುಂದಾಗಿರುವ ಕ್ರಮ ಜಾರಿ ಬರದಂತೆ ಪಾಲಕರು, ಚಹಿಂತಕರು ವಿರೋಧ ವ್ಯಕ್ತಪಡಿಸಬೇಕೆಂದು ಆಗ್ರಹಿಸಿದರು. ಇತ್ತೀಚೆಗೆ ಶಿಕ್ಷಕರ ನೇಮಕಾತಿ ಪರೀಕ್ಷೆಗೆ 3.50 ಲಕ್ಷ ಬಿಎಡ್ ಶಿಕ್ಷಣ ಪಡೆದವರು ಪರೀಕ್ಷೆ ಬರೆದರು ಇದರಲ್ಲಿ ಕೇವಲ 13 ಸಾವಿರ ಜನರು ಮಾತ್ರ ಪಾಸ್ ಆದರೂ. ಇದರ ಸೂಚನೆ ಕಲಿಕಾ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಕೊರತೆಯೇ ಪ್ರಮುಖ ಕಾರಣವಾಗಿದೆ. ಇದರಿಂದ ಶಿಕ್ಷಣ ಶಕ್ತಿಯುತ ಆಯಧ ಎನ್ನುವ ಬದಲು ನಿಶಕ್ತಿ ಆಯುಧವಾಗುತ್ತದೆ ಎಂದು ತಿಳಿಸಿದರು. ಈ ವೇಳೆ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಚಿನ್ನಾರಡ್ಡಿ ಬಿರದಾರ ಇದ್ದರು.