ವಿಶ್ವದಲ್ಲೇ ಬಂಜಾರ ಸಮುದಾಯದ ಏಕೈಕ ಪವಿತ್ರ ಕ್ಷೇತ್ರವಾದ ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಫೆ.13, 14 ಮತ್ತು 15ರಂದು ನಡೆಯಲಿರುವ ಸಂತ ಸೇವಾಲಾಲ್ 287ನೇ ಜಯಂತ್ಯುತ್ಸವ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಉಪಸಭಾಧ್ಯಕ್ಷ ಮತ್ತು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದ್ದಾರೆ.
- ಭಾಯಾಗಡ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ರುದ್ರಪ್ಪ ಲಮಾಣಿ ಮನವಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಿಶ್ವದಲ್ಲೇ ಬಂಜಾರ ಸಮುದಾಯದ ಏಕೈಕ ಪವಿತ್ರ ಕ್ಷೇತ್ರವಾದ ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಫೆ.13, 14 ಮತ್ತು 15ರಂದು ನಡೆಯಲಿರುವ ಸಂತ ಸೇವಾಲಾಲ್ 287ನೇ ಜಯಂತ್ಯುತ್ಸವ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಉಪಸಭಾಧ್ಯಕ್ಷ ಮತ್ತು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.ತಾಲೂಕಿನ ಸಂತ ಸೇವಾಲಾಲ್ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಗುರುವಾರ ಸಂತ ಸೇವಾಲಾಲ್‌ರ 287ನೇ ಜಯಂತ್ಯುತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಡಳಿತ ಸಹಕಾರದೊಂದಿಗೆ 3 ದಿನಗಳ ಜಾತ್ರೆಯನ್ನು ಯಶಸ್ವಿಗೊಳಿಸಲು ಸಮುದಾಯದವರು ಸಹಕಾರ ನೀಡಬೇಕು. ಫೆ.14ರಂದು ರಾಜ್ಯ ಸರ್ಕಾರದ ಮಂತ್ರಿಮಂಡಲದ ಸಚಿವರು, ಶಾಸಕರು ಗಣ್ಯರು ಆಗಮಿಸಲಿದ್ದಾರೆ. ಫೆ15ರಂದು ಬೋಗ್ ಕಾರ್ಯಕ್ರಮ ಇರುತ್ತದೆ. ಜಾತ್ರೆಯಲ್ಲಿ ನೀರು, ಆಹಾರ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಆಗಬೇಕು. ಸೇವಾಲಾಲರ ಮಹಿಮೆಯಿಂದ ಜಾತ್ರೆ ಯಶಸ್ವಿಗೊಳಿಸೋಣ ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಿ, ಯಾವುದೇ ಇಲಾಖೆಗಳು ಗೊಂದಲ ಮಾಡದೇ ಜಾತ್ರೆ ಯಶಸ್ಸಿಗೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಚಿನ್ನಿಕಟ್ಟೆ, ಹಳೇ ಜೋಗ, ಸೂರಗೊಂಡನಕೊಪ್ಪದಿಂದ ಭಾಯಾಗಡ್ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ದಿಪಡಿಸಲಾಗುವುದು. ಜಾತ್ರೆ ಸಂಬಂಧಿಸಿದಂತೆ ಯಾವುದೇ ಏಜೆನ್ಸಿಯವರಾದರೂ ಶುಕ್ರವಾರದಿಂದಲೇ ಕೆಲಸ ಆರಂಭಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಮಹಾಮಠ ಸಮಿತಿ ಪ್ರಧಾನ ಧರ್ಮದರ್ಶಿ ಬಿ.ಹೀರಾ ನಾಯ್ಕ, ಅಧ್ಯಕ್ಷ ಎನ್.ಹನುಮಂತ ನಾಯ್ಕ, ಪ್ರದಾನ ಕಾರ್ಯದರ್ಶಿ ನರೇನಹಳ್ಳಿ ಅರುಣಕುಮಾರ, ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ಎಸಿ ಎಚ್.ಬಿ.ಚನ್ನಪ್ಪ, ತಹಸೀಲ್ದಾರ್ ಎಂ.ಪಿ.ಕವಿರಾಜ, ತಾ.ಪಂ. ಇಒ ಎಚ್.ವಿ. ರಾಘವೇಂದ್ರ, ನಿರ್ದೇಶಕ ಡಾ. ಎಲ್.ಈಶ್ವರನಾಯ್ಕ, ಸುರೇಂದ್ರ ನಾಯ್ಕ, ಖಜಾಂಚಿ ಕೆ.ಟಿ.ನಾಗರಾಜ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
- - -(ಬಾಕ್ಸ್) * ಇಲಾಖೆಗಳು ಜವಾಬ್ದಾರಿ ಮೆರೆಯಲಿ: ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಸೇವಾಲಾಲ್ ಜಯಂತ್ಯುತ್ಸವ ಸರ್ಕಾರದ ಕಾರ್ಯಕ್ರಮವಲ್ಲ, ಸಮುದಾಯದವರು ಆಚರಿಸುವ ಜಾತ್ರೆ. ಆದ್ದರಿಂದ ಸಮುದಾಯದವ ಸಹಕಾರ ಮುಖ್ಯವಾಗಿದೆ. ಜಿಲ್ಲಾಡಳಿತ ಲಾ ಅಂಡ್ ಆರ್ಡರ್ ಮಾತ್ರ ನಿರ್ವಹಿಸುತ್ತದೆ. ಮೂರು ದಿನಗಳ ಜಯಂತಿ ಕಾರ್ಯಕ್ರಮದಲ್ಲಿ ನೀರು, ಆಹಾರ, ಬೆಳಕು, ಸಾರಿಗೆ, ಆರೋಗ್ಯ, ಶೌಚಾಲಯ ಹಾಗೂ ಹೆಲಿಪ್ಯಾಡ್ ನಿರ್ಮಾಣದ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆಯವರು ಜವಾಬ್ದಾರಿಯಿಂದ ನಿರ್ವಹಿಸುವಂತೆ ಸೂಚಿಸಿದರು.
- - --5ಎಚ್.ಎಲ್.ಐ5.ಜೆಪಿಜಿ:
ಸಂತ ಸೇವಾಲಾಲ್ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಗುರುವಾರ ಸಂತ ಸೇವಾಲಾಲ್‌ರ 287ನೇ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿದರು. ಶಾಸಕ ಡಿ.ಜಿ. ಶಾಂತನಗೌಡ,ಜಿಲ್ಲಾಧಿಕಾರಿ. ಜಿಪಂ, ಸಿಇಒ, ಇತರೆ ಅಧಿಕಾರಿಗಳು, ಸಮುದಾಯ ಮುಖಂಡರು ಇದ್ದಾರೆ.