ಏಳು ದಂಡು ಜೋಡಿ ಮುನಿಯಪ್ಪನ ಜಾತ್ರೆ ಮಹೋತ್ಸವ

| Published : Jan 17 2024, 01:49 AM IST

ಸಾರಾಂಶ

ಹನೂರುಏಳು ದಂಡು ಜೋಡಿ ಮುನಿಯಪ್ಪನ ಜಾತ್ರೆ ಪ್ರಯುಕ್ತ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿತು. ಹನೂರು ತಾಲೂಕಿನ ಕೂಡ್ಲೂರಿನಲ್ಲಿ ಏಳುದಂಡು ಜೋಡಿ ಮುನಿಯಪ್ಪನ ಜಾತ್ರೆ ಮಹೋತ್ಸವ ಮಂಗಳವಾರ ಗುಂಡೇಗಾಲದಯ್ಯ ಅಲಂಕಾರ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾಮಂಗಳಾರತಿಯೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರುಏಳು ದಂಡು ಜೋಡಿ ಮುನಿಯಪ್ಪನ ಜಾತ್ರೆ ಪ್ರಯುಕ್ತ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿತು. ಹನೂರು ತಾಲೂಕಿನ ಕೂಡ್ಲೂರಿನಲ್ಲಿ ಏಳುದಂಡು ಜೋಡಿ ಮುನಿಯಪ್ಪನ ಜಾತ್ರೆ ಮಹೋತ್ಸವ ಮಂಗಳವಾರ ಗುಂಡೇಗಾಲದಯ್ಯ ಅಲಂಕಾರ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾಮಂಗಳಾರತಿಯೊಂದಿಗೆ ನಡೆಯಿತು. ಜೋಡಿ ಮುನಿಯಪ್ಪನ ಜಾತ್ರೆ ಮಹೋತ್ಸವ ತಲಾತಲಾಂತರದಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದೊಡ್ಡ ಜಾತ್ರಾ ಮಹೋತ್ಸವ ಕಳೆದ ಸಾಲಿನಲ್ಲಿ ಕೊರೋನ ಇದ್ದ ಕಾರಣ ಜಾತ್ರೆ ನಡೆಯದೆ ಪೂಜಾ ಕಾರ್ಯಕ್ರಮಗಳು ಮಾತ್ರ ನಡೆದಿತ್ತು ಈ ಬಾರಿ ಪ್ರಾಣಿಬಲಿ ನಿಷೇಧವಿತ್ತು. ಕಟ್ಟುನಿಟಿನ ಕ್ರಮ ಇರುವುದರಿಂದ ಪೊಲೀಸರು ವಿವಿಧ ಗ್ರಾಮಗಳಲ್ಲಿ ನಾಗರಿಕರಿಗೆ ಅರಿವು ಮೂಡಿಸಿ ಈ ಬಾರಿ ಪ್ರಾಣಿಬಲಿ ನಿಷೇಧ ಇರುವುದರಿಂದ ಸಾತ್ವಿಕ ಪೂಜೆ ಸಲ್ಲಿಸಿ ಪ್ರಾಣಿ ಬಲಿ ಬಿಡಿ ಎಂದು ಪೊಲೀಸರು ನಾಗರಿಕರಿಗೆ ವಿವಿಧ ಗ್ರಾಮಗಳಲ್ಲಿ ಹರಿವು ಮೂಡಿಸಿದರು. ವಿವಿಧ ಕಡೆಯಿಂದ ನೆರವಿದ್ದ ಭಕ್ತರು: ಏಳು ದಂಡು ಜೋಡಿ ಮುನಿಯಪ್ಪನ ಜಾತ್ರೆ ಮಹೋತ್ಸವಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ ಹಾಗೂ ತಮಿಳುನಾಡಿನಿಂದಲೂ ಸಹ ಪೂಜೆಗೆ ಆಗಮಿಸಿದ್ದ ಭಕ್ತರು ಮುನಿಯಪ್ಪನಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಂಡರು.ತಪಾಸಣೆ: ಏಳು ದಂಡು ಜೋಡಿ ಮುನಿಯಪ್ಪನ ಎರಡು ದಿನಗಳ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರ ವಾಹನಗಳನ್ನು ಪೊಲೀಸರು ನಾಲಾ ರೋಡ್ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದರು. ಪ್ರಾಣಿ ಬಲಿ ನಿಷೇಧ ಇರುವುದರಿಂದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.