ಪ್ರತಿ ತಿಂಗಳು 7 ಲಕ್ಷ ಕೆಜಿ ಅಕ್ಕಿ ಕಡಿತ: ವೆಂಕಟೇಶ ಆರ್.ಗುತ್ತೆದಾರ

| Published : Jul 07 2025, 11:48 PM IST

ಸಾರಾಂಶ

ಪ್ರತಿ ತಿಂಗಳಿಗೆ 6 ಲಕ್ಷ ಕೆ.ಜಿ. ಆಗುತ್ತದೆ ಇಷ್ಟೊಂದು ಪ್ರಮಾಣದ ಅಕ್ಕಿ ಎಲ್ಲಿಗೆ ಹೋಗುತ್ತದೆ? ಎಂದು ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ ಆರ್.ಗುತ್ತೆದಾರ ಗರಂ ಆದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 93070 ಪಡಿತರ ಚೀಟಿಗಳಿದ್ದು, ಒಟ್ಟು 3 ಲಕ್ಷ ಪಡಿತರ ಚೀಟಿದಾರರು ಇದ್ದಾರೆ. ಚೀಟಿದಾರರಿಗೆ ಪ್ರತಿ ತಿಂಗಳು 2 ಕೆಜಿ ಅಕ್ಕಿ ಕಡಿಮೆ ಕೊಡುತ್ತಿದ್ದೀರಿ, ಪ್ರತಿ ತಿಂಗಳಿಗೆ 6 ಲಕ್ಷ ಕೆ.ಜಿ. ಆಗುತ್ತದೆ ಇಷ್ಟೊಂದು ಪ್ರಮಾಣದ ಅಕ್ಕಿ ಎಲ್ಲಿಗೆ ಹೋಗುತ್ತದೆ? ಎಂದು ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ ಆರ್.ಗುತ್ತೆದಾರ ಗರಂ ಆದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕ ಅಧ್ಯಕ್ಷ ವೆಂಕಟೇಶ ಆರ್.ಗುತ್ತೇದಾರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅಂತ್ಯೋದಯ 9039, ಆದ್ಯತಾ 82080 ಆದ್ಯತೇತರ 1951, ಪಟ್ಟು 93,070 ಪಡಿತರ ಚೀಟಿಗಳಿವೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನಭಾಗ್ಯ ಅಕ್ಕಿಯಲ್ಲಿ ಪ್ರತಿ ಕಾರ್ಡ್‌ಗೆ 2 ಕೆಜಿ ಅಕ್ಕಿ ಕಡಿತ ಮಾಡುತ್ತಿದ್ದು, ಇದರ ಲೆಕ್ಕ ತಿಂಗಳಿಗೆ 7 ಲಕ್ಷ ಕೆಜಿ ಅಕ್ಕಿ ಉಳಿಕೆ ಆಗುತ್ತದೆ ಇಷ್ಟೊಂದು ಪ್ರಮಾಣ ಅಕ್ಕಿ ಎಲ್ಲಿಗೆ ಹೋಗುತ್ತದೆ. ಆಹಾರ ನಿರೀಕ್ಷಕರು ಚೀಲ, ಮಳೆ, ಗಾಳಿ, ಬಿಸಿಲಿಗೆ ಹಾಳಾಗುತ್ತವೆ. ಚೀಲುಗಳಲ್ಲಿ ಸೋರಿಕೆ ಆಗುತ್ತದೆ ಎಂದು ಸಬೂಬು ಹೇಳಿ ಭಾರಿ ಗೋಲ್ಮಾಲ್ ಮಾಡುತ್ತಿದ್ದೀರಿ. ಕೂಡಲೇ ಆಹಾರ ಇಲಾಖೆ ಎಲ್ಲ ಅಧಿಕಾರಿ ಹಾಗೂ ಆಹಾರ ನಿರೀಕ್ಷಕರು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಸಮಿತಿ ಠರಾವ್ ಮಾಡಬೇಕೆಂದು ಸದಸ್ಯರಾದ ಎಂ.ಲಿಂಗರಾಜ, ಗದ್ದೆನಗೌಡ ಪಾಟೀಲ್ ಆಗ್ರಹಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಗೆ ಸಿಡಿಪಿಒ, ಡಿಪೋ ಮ್ಯಾನೇಜನರ, ಆಹಾರ ಇಲಾಖೆ ಅಧಿಕಾರಿಗಳು ಸಭೆಗೆ ಬಂದಿಲ್ಲ. ಕೂಡಲೇ ಅವರ ವಿರುದ್ದ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳು ಪತ್ರ ಬರಯಬೇಕು. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ಜಾರಿ ಮಾಡದೇ ಅಧಿಕಾರಿಗಳು ಕುಂಟು ನೆಪಹೇಳಿ ಸರ್ಕಾರಕ್ಕೆ ಕಳಂಕ ತರುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಸದಸ್ಯರು ಲಕ್ಷ್ಮೀ ದೇವಿ ಆರೋಪಿಸಿದರು.

ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದಡಿ ಸರ್ಕಾರ ಸಮರ್ಪಕ ಹಣಕಾಸು ನೀಡುತ್ತದೆ. ಆದರೆ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಸಾರಿಗೆ ಇಲಾಖೆ ಚಾಲಕ, ನಿರ್ವಾಹಕರು ಮಹಿಳೆಯರು ಕುರಿತು ಅಣಕದ ಮಾತುಗಳು ಆಡುತ್ತಾರೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸುಗಳ ವ್ಯವಸ್ಥೆ ಇಲ್ಲ, ವಿದ್ಯಾರ್ಥಿಗಳ ಪಡಿಪಾಟೀಲು ಹೇಳತೀರದಾಗಿದೆ. ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಬಸ್ಸಿನಿಂದ ಕೆಳಗಡೆ ಬಿದ್ದು ಕಾಲು ಕಳೆದುಕೊಂಡಿದ್ದಾಳೆ. ಇದಕ್ಕೆ ಚಾಲಕ ನಿರ್ವಾಹಕ ಹಾಗೂ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಕೈಗೊಳ್ಳದೇ ಇದ್ದರೆ ಸಾರಿಗೆ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದೆಂದು ಸದಸ್ಯರಾದ ಶಾಂತಾ ಹಣಗಿ, ಲಕ್ಷ್ಮೀದೇವಿ ಎಚ್ಚರಿಕೆ ನೀಡಿದರು.

ಈ ವೇಳೆ ತಾ.ಪಂ ಇಓ ಉಮೇಶ, ಪಂಚಾಯತ್ ಸಹಾಯಕ ನಿರ್ದೇಶಕ ಪಂಪನಗೌಡ, ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ, ಸದಸ್ಯರಾದ ಗುಂಡಪ್ಪ ಸಾಹುಕಾರ ಮೇದಿನಾಪುರ, ಮಲ್ಲನಗೌಡ, ಅಸ್ಲಂಪಾಶ ಹಟ್ಟಿ, ಶಿವಕುಮಾರ ಕನ್ನಾಪುರಟ್ಟಿ, ಗೌಡಪ್ಪ ಗೋಲಪಲ್ಲಿ ಸೇರಿದಂತೆ ಇದ್ದರು.