ಆಫಜಲ್ಪುರ ಹಾಗೂ ಆಳಂದ ಜನತೆಗೆ ವರದಾನವಾಗಬೇಕಿದ್ದ ಕೆರೆ ಕಟ್ಟೆ ತುಂಬಿಸುವ ಭೀಮಾ ಯೋಜನೆಯು ವಿಳಂಬ ಖಂಡಿಸಿ ಹಾಗೂ ಇತ್ತೀಚೆಗೆ ಎನ್‌ಎಚ್‌ಎಐ ಕಾಮಗಾರಿಯಿಂದಾಗಿ ಕೊಳವೆ ತುಂಡಾಗಿ ಇಡೀ ಯೋಜನೆ ವಿಳಂಬಕ್ಕೆ ಕಾರಣವಾಗಿರುವ ಬೆಳವಣಿಗೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ.ಆಫಜಲ್ಪುರ ಹಾಗೂ ಆಳಂದ ಜನತೆಗೆ ವರದಾನವಾಗಬೇಕಿದ್ದ ಕೆರೆ ಕಟ್ಟೆ ತುಂಬಿಸುವ ಭೀಮಾ ಯೋಜನೆಯು ವಿಳಂಬ ಖಂಡಿಸಿ ಹಾಗೂ ಇತ್ತೀಚೆಗೆ ಎನ್‌ಎಚ್‌ಎಐ ಕಾಮಗಾರಿಯಿಂದಾಗಿ ಕೊಳವೆ ತುಂಡಾಗಿ ಇಡೀ ಯೋಜನೆ ವಿಳಂಬಕ್ಕೆ ಕಾರಣವಾಗಿರುವ ಬೆಳವಣಿಗೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಉಭಯ ತಾಲೂಕುಗಳ ರೈತರು ಯುವ ಮುಖಂಡ, ಕಲಬುರಗಿ, ಯಾದಗಿರಿ, ಬೀದರ್‌ ಹಾಲು ಒಕ್ಕೂಟದ ಅಧ್ಯಕ್ಷ ಆರ್‌ ಕೆ ಪಾಟೀಲ್‌ ನೇತೃತ್ವದಲ್ಲಿ ಯೋಜನೆಯ ಕೊಳವೆ ತುಂಡಾಗಿ ಬಿದ್ದಿರುವ ಬಡದಾಳ್‌- ಅರ್ಜುಣಗಿ ಚೈನೇಜ್‌ 19. 66 ಕಿಮೀ ನಲ್ಲಿ ಹೆದ್ದಾರಿ ಮೇಲೆ ಆ. 27 ರಿಂದ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರ್‌ ಕೆ ಪಾಟೀಲ್‌, ಕೊಳವೆ ತುಂಡಾಗಿ ಬಿದ್ದು 9 ತಿಂಗಳಾದರೂ ಕೇಳುವವರಿಲ್ಲದಂತಾಗಿದೆ. ಮಳೆ ಕೊರತೆಯಲ್ಲಿ ಭೀಮಾ ಬರಿದಾಗಿದ್ದರಿಂದ ರೈತರು ಕೊಳವೆ ತುಂಡಾದರೂ ಸುಮ್ಮನಿದ್ದರು. ಇದೀಗ ಭೀಮಾ ತುಂಬಿ ತುಳುಕುತ್ತಿರುವುದರಿಂದ ತುಂಡಾದ ಕೊಳವೆ ಮರು ನಿರ್ಮಾಣ, ಕೆರೆಕಟ್ಟೆ ತುಂಬಿಸಲು ನಾವು ಬೀದಿಗೆ ಇಳಿಯುತ್ತಿದ್ದೇವೆ ಎಂದಿದ್ದಾರೆ.ಸಿದ್ದರಾಮ ಪ್ಯಾಟಿ, ಶಿವಪುತ್ರಪ್ಪ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸವಪ್ಪ ಪಾಟೀಲ್‌, ಗುರುಲಿಂಗಮ್ಮ ಜಂಗಮ ಪಾಟೀಲ್‌, ಬಸವರಾಜ ಉಪ್ಪೀನ್‌, ಚನ್ನಬಸಪ್ಪ ಪಾಟೀಲ್‌, ಬಸವರಾಜ ಪವಾಡಶೆಟ್ಟಿ, ವಿಶ್ವನಾಥ ಸರಸಂಬಿ ವಿಕ್ರಂ ಅನ್ಸಾರಿ ಅನೇಕರಿದ್ದರು.