ಸಾರಾಂಶ
ರಾಮನಗರ: ಮಹಿಳೆಯರ ಸ್ವ ಉದ್ಯೋಗ ಪರಿಕಲ್ಪನೆಗೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಿ. ಜಯಕರಶೆಟ್ಟಿ ತಿಳಿಸಿದರು.
ನಗರದ ಶೆಟ್ಟಿಹಳ್ಳಿಬೀದಿ ಆದಿಶಕ್ತಿ ಸಮುದಾಯ ಭವನದಲ್ಲಿ ಶನಿವಾರ ಬೀಡಿ ಕಾಲೋನಿಯ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಂಗಲ್ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗೆ ಉಚಿತ ಟೈಲರಿಂಗ್ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಇಂದು ಮಹಿಳೆಯರು ತನ್ನ ಕಾಲ ಮೇಲೆ ನಿಂತು ಸ್ವ ಉದ್ಯೋಗ ನಡೆಸುತ್ತಾ ಕುಟುಂಬ ಜೀವನ ನಡೆಸುವಂತಾಗಿದೆ. ಮಹಿಳೆಯರನ್ನು ಶಿಕ್ಷಣವಂತರನ್ನಾಗಿ ಮಾಡುವುದು ಅವರಿಗೆ ಸ್ವ ಉದ್ಯೋಗ ತರಬೇತಿ ನೀಡುವ ಕಾರ್ಯಕ್ರಮಗಳ ಮುಖಾಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹಲವು ಸ್ವದ್ಯೋಗದ ತರಬೇತಿಗಳನ್ನು ನೀಡುತ್ತಿದೆ ಎಂದು ಹೇಳಿದರು.
ಹಲವಾರು ಮಹಿಳೆಯರು ಶಿಬಿರಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಂಡು ಸ್ವ ಉದ್ಯೋಗ ನಡೆಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಯೋಜನೆ ಜಿಲ್ಲೆಯಲ್ಲಿ ಕಾರ್ಯಗತಗೊಂಡಿದೆ. ಹಣಕಾಸು ವಹಿವಾಟಿನ ಜೊತೆಗೆ ಸಮಾಜಮುಖಿಯಾಗಿ ಗ್ರಾಮಾಭಿವೃದ್ಧಿ ಯೋಜನೆ ಮುನ್ನಡೆಯತ್ತಾ ಬಂದಿದೆ ಎಂದು ತಿಳಿಸಿದರು.ಸಮಾಜ ಸೇವಕ ಸೈಯದ್ ಅಸ್ಲಂ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದ ಮುಖಾಂತರ ಮಹಿಳೆಯರ ಸ್ವಾವಲಂಬಿ ಜೀವನ ಉತ್ತೇಜಿಸಲು ಆರ್ಥಿಕವಾಗಿ ಸಬಲರಾಗುವಂತೆ ತನ್ನ ಕಾಲ ಮೇಲೆ ತಾನು ನಿಂತು ಸ್ವ ಉದ್ಯೋಗ ಕಂಡುಕೊಂಡು ಕುಟುಂಬ ಜೀವನಕ್ಕೆ ಸಹಕಾರ ನೀಡುವಂತಾಗಲು ಅವರಿಗೆ ಉಚಿತವಾಗಿ ಸಂಸ್ಥೆ ವತಿಯಿಂದ ಟೈಲರಿಂಗ್ ತರಬೇತಿ ನೀಡಿ ಮಹಿಳೆಯರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಸಂಸ್ಥೆಯ ಸಮಾಜಮುಖಿ ಕಾರ್ಯಕ್ಕೆ ಕೈಗನ್ನಡಿ ಹಿಡಿದಂತಾಗಿದೆ ಎಂದರು.
ಶಿಬಿರದಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿದ 24 ಮಹಿಳೆಯರಿಗೆ ಪ್ರಮಾಣಪತ್ರ ನೀಡಲಾಯಿತು. ಕೆಂಗಲ್ ಯೋಜನಾಧಿಕಾರಿ ನಾಗಭೂಷಣ್ ಪೈ, ಜಿಲ್ಲಾ ಜನನಾಗೃತಿ ವೇದಿಕೆ ಸದಸ್ಯ ವಿಭೂತಿಕೆರೆ ಶಿವಲಿಂಗಯ್ಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಡಿ.ಕೆ. ಕನ್ನಿಕಾ, ವಲಯ ಮೇಲ್ವೀಚಾರಕಿ ಸೌಮ್ಯ, ಒಕ್ಕೂಟ ಅಧ್ಯಕ್ಷೆ ಸಾಹಿನ್ ತಾಜ್, ಜ್ಸೇವಾ ಪ್ರತಿನಿಧಿ ಸಲ್ಮಾ ಟೈಲರಿಂಗ್ ತರಬೇತಿ ಕೇಂದ್ರದ ಶಿಕ್ಷಕಿ ರುಕ್ಷರ್ ಬಾನು ಇದ್ದರು.27ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಶೆಟ್ಟಿಹಳ್ಳಿಬೀದಿ ಆದಿಶಕ್ತಿ ಸಮುದಾಯ ಭವನದಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ನೀಡಲಾಯಿತು.