ಸಾರಾಂಶ
ಪಿಲ್ಲೇಚರಿ ಮಾಲೀಕ ನಾಸೀರ್ ಎಂಬುವನ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆ 20 ದಿನಗಳ ಹಿಂದೆ ಗೀತಾಮಂದಿರ ಬಡಾವಣೆಯಲ್ಲಿರುವ ನಾಸೀರ್ ಪಿಲ್ಲೇಚರಿಗೆ ಕೆಲಸಕ್ಕೆ ಸೇರಿದ್ದರು.
ರಾಮನಗರ :
ಪಿಲ್ಲೇಚರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಅದರ ಮಾಲೀಕ ಲೈಂಗಿಕ ದೌರ್ಜನ್ಯ ನೀಡಿರುವ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರದ ಗೀತಾಮಂದಿರ ಬಡಾವಣೆಯ ಪಿಲ್ಲೇಚರಿ ಮಾಲೀಕ ನಾಸೀರ್ ಎಂಬುವನ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆ 20 ದಿನಗಳ ಹಿಂದೆ ಗೀತಾಮಂದಿರ ಬಡಾವಣೆಯಲ್ಲಿರುವ ನಾಸೀರ್ ಪಿಲ್ಲೇಚರಿಗೆ ಕೆಲಸಕ್ಕೆ ಸೇರಿದ್ದರು.ಕೆಲಸಕ್ಕೆ ಸೇರಿದ ದಿನದಿಂದ ನಾಸೀರ್ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಈತನ ಕಿರುಕುಳದಿಂದ ಬೇಸತ್ತ ಮಹಿಳೆ ಕೆಲಸವನ್ನು ಬಿಟ್ಟು ಹೋಗಿದ್ದು, ಮಂಗಳವಾರ ತನಗೆ ಬರಬೇಕಿದ್ದ ಕೂಲಿ ಹಣವನ್ನು ಕೊಡುವಂತೆ ಕೇಳಲು ನಾಸೀರ್ ಬಳಿ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿ, ನನಗೆ ಲೈಂಗಿಕವಾಗಿ ಸಹಕಾರ ನೀಡು ಎಂದು ಬೇಡಿಕೆ ಇಟ್ಟಿದ್ದಾನೆ. ಇದನ್ನು ಮಹಿಳೆ ತಿರಸ್ಕರಿಸಿದಾಗ, ಸಂತ್ರಸ್ತೆಯ ಕೈ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಸಂಬಂಧ ಮಹಿಳೆ ಐಜೂರು ಪೊಲೀಸ್‍ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.