ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ: ದೂರು

| Published : May 16 2024, 12:54 AM IST

ಸಾರಾಂಶ

ಹೆಗ್ಗಾರದ ಕೃಷ್ಣ ಶಿವರಾಮ ಭಟ್ಟ ಬಂಧಿತ ಆರೋಪಿ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಅಂಕೋಲಾ: ಬಾಲಕಿಗೆ ತಿಂಡಿ ಕೊಡಿಸುತ್ತೇನೆಂದು ಪುಸಲಾಯಿಸಿ ತೋಟಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ 72 ವರ್ಷದ ವೃದ್ಧನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಪ್ರಕರಣ ದಾಖಲಾಗಿದೆ. ಹೆಗ್ಗಾರದ ಕೃಷ್ಣ ಶಿವರಾಮ ಭಟ್ಟ ಬಂಧಿತ ಆರೋಪಿ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಸಿಪಿಐ ಶ್ರೀಕಾಂತ ತೋಟಗಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸುಹಾಸ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.ಎವರೆಸ್ಟ್ ಚಿಕನ್ ಮಸಾಲ ಬಳಕೆ: ಅಧಿಕಾರಿಗಳ ಸೂಚನೆ

ಕಾರವಾರ: ಕುಮಟಾ ತಾಲೂಕಿನ ಹೊನಮಾವುನ ವಿಜಯ ಸ್ಟೋರ್‌ನಲ್ಲಿನ ಎವರೆಸ್ಟ್‌ ಚಿಕನ್‌ ಮಸಾಲ ಬಳಕೆ ಅಸುರಕ್ಷಿತ ಎಂಬ ವರದಿ ಬಂದಿದೆ ಎಂದು ಆಹಾರ ಸುರಕ್ಷತಾಧಿಕಾರಿಗಳು ತಿಳಿಸಿದ್ದಾರೆ.

ಈ ಚಿಕನ್‌ ಮಸಾಲ ಪದಾರ್ಥವನ್ನು ಸಂಗ್ರಹಿಸಿ ಬೆಂಗಳೂರಿನ ಯುರೇಕಾ ಅನಾಲಿಟಿಕಲ್‌ ಸರ್ವಿಸಸ್‌ ಪ್ರೈ. ಲಿ.ನ ಪ್ರಯೋಗಾಲಯದಲ್ಲಿ ಪರೀಕ್ಷಗೆ ಒಳಪಡಿಸಲಾಗಿತ್ತು. ಅದರಲ್ಲಿ ಎವರೆಸ್ಟ್‌ ಚಿಕನ್‌ ಮಸಾಲ 500 ಗ್ರಾಂ (MFG: Mar-2024 Exp: May- 2025 Batch No: E180D504062) FSSAI License No: 10012022000526 ಉತ್ಪನ್ನವು ಅಸುರಕ್ಷಿತ ವೆಂದು ವರದಿ ಬಂದಿದೆ ಎಂದು ಆಹಾರ ಸುರಕ್ಷತಾಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಆಹಾರ ಪದಾರ್ಥ ಮಾರಾಟಗಾರರು ಸಾರ್ವಜನಿಕರಿಗೆ ಮೇಲೆ ತಿಳಿಸಿದ ಬ್ಯಾಚ್‌ ನಂಬರ್‌ ಉತ್ಪನ್ನ ಮಾರಾಟವಾಗದಂತೆ ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ.ಸಾರ್ವಜನಿಕರು ಈ ಬ್ಯಾಚ್‌ನ ಎವರೆಸ್ಟ್‌ ಚಿಕನ್‌ ಮಸಾಲ ಖರೀದಿಸಿದ್ದರೆ ಕೂಡಲೇ ಸೇವನೆ ಮಾಡದೇ, ಖರೀದಿಸಿದ ಅಂಗಡಿಗಳಿಗೆ ನಿಯಮಾನುಸಾರ ಹಿಂದಿರುಗಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.