ತಾಲೂಕಿನ ಅರೆಹಳ್ಳಿ ಪಟ್ಟಣದ ದೇವಸ್ಥಾನ ಬೀದಿಯಲ್ಲಿ ವಾಸವಿರುವ ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಪಕ್ಕದ ಮನೆಯ ಅಪ್ರಾಪ್ತೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಅರೆಹಳ್ಳಿ ಪಟ್ಟಣದ ದೇವಸ್ಥಾನ ಬೀದಿಯಲ್ಲಿ ವಾಸವಿರುವ ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಪಕ್ಕದ ಮನೆಯ ಅಪ್ರಾಪ್ತೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಕಳೆದ ಎರಡು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೇಘಾಲಯ ರಾಜ್ಯದ ಕುಟುಂಬವೊಂದರ ಸುಮಾರು ಐದು ವರ್ಷದ ಬಾಲಕಿಯನ್ನು ಪಕ್ಕದ ಮನೆಯ 35 ವರ್ಷದ ಸೈಯದ್ ಅಲಿ ಎಂಬಾತ ಯಾರು ಇಲ್ಲದ ಸಮಯವನ್ನು ದುರುಪಯೋಗಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯ ಎಸಗಿದ ಆರೋಪಿಗೆ ಈಗಾಗಲೇ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು ಕಳೆದೆರಡು ತಿಂಗಳ ಹಿಂದಷ್ಟೇ ಕೂಲಿ ಕೆಲಸ ನಿಮಿತ್ತ ಪಟ್ಟಣಕ್ಕೆ ವಲಸೆ ಬಂದಿದ್ದ ಎನ್ನಲಾಗಿದೆ. ಪೋಷಕರ ದೂರಿನ ಅನ್ವಯ ಅರೇಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪೋಕ್ಸೋ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.

ವಲಸೆ ಕಾರ್ಮಿಕರ ಹೆಚ್ಚಳ:

ಅಸ್ಸಾಂ ಮೂಲದವರೆಂದು ಹೇಳಿಕೊಂಡು ಅರೆಹಳ್ಳಿ ಪಟ್ಟಣಕ್ಕೆ ಕೂಲಿ ಹಾಗೂ ಕಾಫಿ ತೋಟದ ಕೆಲಸಕ್ಕಾಗಿ ದಿನನಿತ್ಯ ಬರುತ್ತಿರುವ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅವರಲ್ಲಿ ಅಕ್ರಮ ಬಾಂಗ್ಲಾ ನುಸುಳುಕೋರರೇ ಹೆಚ್ಚಿದ್ದಾರೆ ಎನ್ನುವ ಆರೋಪ ಸ್ಥಳೀಯರದ್ದು. ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಹಲವು ಸ್ಥಳೀಯರ ಒತ್ತಾಯವಾಗಿದೆ. ಅಲ್ಲದೆ ಇಂತಹ ನೀಚ ಕೃತ್ಯಗಳು ಮರುಕುಳಿಸಿದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.