ಸಾರಾಂಶ
₹2000 ಕೋಡುತ್ತೇನೆ, ಬಾ ಆಸೆ ಪೂರೈಸು ಎಂದು ಆಕೆಯ ವೇಲು ತೆಗೆದುಕೊಂಡು ಕೈ- ಕಾಲು ಕಟ್ಟಿ, ಆತನ ಬಳಿಯಿದ್ದ ಟವಲ್‌ನಿಂದ ಬಾಯಿಗೆ ತುರುಕಿದ್ದಾನೆ.
ಹೊಳೆಹೊನ್ನೂರು: ಯುಕನೋರ್ವ ಯುವತಿಯನ್ನು ಅಡ್ಡಗಟ್ಟಿ ಹಣ ನೀಡುತ್ತೇನೆ, ಆಸೆ ಪೂರೈಸು ಎಂದು ಕರೆದು ಅಸಭ್ಯವಾಗಿ ವರ್ತಿಸಿರುವ ಘಟನೆ ಸಮೀಪದ ಚಂದನಕೆರೆ ಗ್ರಾಮದಲ್ಲಿ ನಡೆದಿದೆ.
ಈ ವಿಷಯ ತಿಳಿದ ಗ್ರಾಮಸ್ಥರು ಯುವಕನ ಅಣ್ಣನ ಬಳಿ ಬಂದು, ತಮ್ಮನಿಗೆ ಬುದ್ಧಿವಾದ ಹೇಳಲು ಹೇಳಿದ್ದಾರೆ. ಆದರೆ ಅಣ್ಣನು ಗ್ರಾಮಸ್ಥರಿಗೇ ಬೈದು ಅನುಚಿತವಾಗಿ ವರ್ತಿಸಿದ ಹಿನ್ನೆಲೆ ಇಬ್ಬರ ವಿರುದ್ಧವೂ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.ಕೂಲಿ ಕೆಲಸ ಮಾಡಿಕೊಂಡಿರುವ ಯುವತಿಗೆ (19) ಚಂದನಕೆರೆ ಯುವಕ ಕುಮಾರ್ (34) ಹೋದ ಕಡೆಯಲ್ಲೆಲ್ಲ ಬೆಂಬಿದ್ದು ಹಣ ಕೊಡುತ್ತೇನೆ, ಆಸೆ ಪೂರೈಸು ಎಂದು ದುಂಬಾಲು ಬೀಳುತ್ತಿದ್ದ. ಈತನ ವರ್ತನೆ ಗಮನಿಸದೇ ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತಿದ್ದಳು.
ಇತ್ತೀಚೆಗೆ ಊಟ ಮುಗಿಸಿಕೊಂಡು ವಾಪಾಸ್ ಕೆಲಸಕ್ಕೆ ಹೋಗುವಾಗ ರಸ್ತೆಯಲ್ಲಿ ಅಡ್ಡಗಟ್ಟಿ ₹2000 ಕೋಡುತ್ತೇನೆ, ಬಾ ಆಸೆ ಪೂರೈಸು ಎಂದು ಆಕೆಯ ವೇಲು ತೆಗೆದುಕೊಂಡು ಕೈ- ಕಾಲು ಕಟ್ಟಿ, ಆತನ ಬಳಿಯಿದ್ದ ಟವಲ್‌ನಿಂದ ಬಾಯಿಗೆ ತುರುಕಿದ್ದಾನೆ. ಅಲ್ಲದೇ, ಯುವತಿಯನ್ನು ಎತ್ತಿಕೊಂಡು ತೋಟದಲ್ಲಿ ಹೋಗಲು ಯತ್ನಿಸಿದ್ದಾನೆ. ಈ ಸಂದರ್ಭ ಯುವತಿಯು ಕಿಡಿಗೇಡಿ ಕುಮಾರ್‌ನಿಂದ ತಪ್ಪಿಸಿಕೊಂಡು ಪಾರಾಗಿದ್ದಾಳೆ.ಇವತ್ತು ಬಜಾವ್ ಆಗಿದ್ದೀಯ, ಇನ್ನೊಮ್ಮೆ ಸಿಕ್ಕರೆ ಬಲತ್ಕಾರ ಮಾಡುವುದಾಗಿ ಹಾಗೂ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.