ಸಾರಾಂಶ
ದಾವಣಗೆರೆ ವಿಶ್ವವಿದ್ಯಾಲಯದ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಆಗುವ ಕಿರುಕುಳದ ಕುರಿತು ಆಂತರಿಕ ದೂರು ಸಮಿತಿ ಅಡಿಯಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತುರ್ತು ಸಂಪರ್ಕ ಸಹಾಯಕ್ಕಾಗಿ ಮಹಿಳಾ ಸಹಾಯವಾಣಿ ಸಂಖ್ಯೆ 1098 ಬಗ್ಗೆ ಮಾಹಿತಿ
ದಾವಣಗೆರೆ: ವಿಶ್ವವಿದ್ಯಾಲಯದ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಆಗುವ ಕಿರುಕುಳದ ಕುರಿತು ಆಂತರಿಕ ದೂರು ಸಮಿತಿ ಅಡಿಯಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ವಕೀಲರಾದ ಅನಿತಾ ಮಾತನಾಡಿ, ಮಹಿಳೆಯರನ್ನು ರಕ್ಷಿಸಲು ಕಾನೂನುಗಳು ಮತ್ತು ಮಾರ್ಗಸೂಚಿಗಳು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿವಿಧ ದೈಹಿಕ, ಮೌಖಿಕ ಮತ್ತು ಅಮೌಖಿಕ ರೂಪಗಳು, ವಿವಿಧ ಸಮಿತಿಗಳು, ಮತ್ತು ಅವರ ಪಾತ್ರಗಳು, ದೂರುಗಳ ವಿಚಾರಣೆ ಮತ್ತು ವಿಚಾರಣೆಗಳ ವರದಿಗಳನ್ನು ತಿಳಿಸಿ, ಸಮಸ್ಯೆಗಳನ್ನು ಪರಿಹರಿಸಲು ಲಭ್ಯವಿರುವ ಕಾಯಿದೆಗಳ ವಿವರಗಳ ಅವರು ಚರ್ಚಿಸಿದರು.
ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಮತ್ತು ನಿಲ್ಲಿಸಲು ಕೆಲಸದ ಸ್ಥಳದಲ್ಲಿ ಅನುಸರಿಸಬಹುದಾದ ವಿಭಿನ್ನ ಮಾರ್ಗಗಳನ್ನು ಸೂಚಿಸಿ ಭಾಗವಹಿಸುವವರಿಗೆ, ಸಖಿ, ಸ್ವಧಾರಾ ಮನೆಗಳು ಮತ್ತು ತುರ್ತು ಸಂಪರ್ಕ ಸಹಾಯಕ್ಕಾಗಿ ಮಕ್ಕಳ ಸಹಾಯವಾಣಿ 112, ಮಹಿಳಾ ಸಹಾಯವಾಣಿ ಸಂಖ್ಯೆ 1098 ಬಗ್ಗೆ ಮಾಹಿತಿ ನೀಡಿದರು.ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪಿ.ಶಶಿಕಲಾ ಮಾತನಾಡಿ, ಲೈಂಗಿಕ ಕಿರುಕುಳವನ್ನು ತಪ್ಪಿಸಲು ಯಾವ ಮುನ್ನೆಚರಿಕೆಗಳ ಮಾಡಿಕೊಡಬಹುದೆಂಬುದರ ಬಗ್ಗೆ ತಿಳಿಸಿ, ಮೊಬೈಲ್ ಬಳಕೆ ಮಿತಿಗೊಳಿಸಿ ಉತ್ತಮ ಸ್ನೇಹಿತರ ಹೊಂದಿರಿ. ಬಲವಾದ ಗಟ್ಟಿ ಮನಸ್ಸು ಆರೋಗ್ಯಕರ ಸ್ನೇಹವು ಸಹಾಯ ಮಾಡುತ್ತದೆ. ವಿಶೇಷವಾಗಿ ಹದಿಹರೆಯದವರು ಮತ್ತು ಯುವ ಜನರಿಗೆ ಇಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ.ಕೆ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣಭಿವೃದ್ದಿ ವಿಭಾಗದ ಡೀನ್ ಡಾ.ಎನ್.ಮಂಜನಾಯ್ಕ, ಡಾ.ಶೇಖರಪ್ಪ ಬಿ. ಮಲ್ಲೂರ, ಡಾ.ಎಚ್.ಈರಮ್ಮ, ದ್ರಾಕ್ಷಾಯಿಣಿ, ಅನುಸೂಯಮ್ಮ, ತೇಜಸ್ವಿನಿ, ರಕ್ಷಿತಾ ವರ್ಣೇಕರ್ ಇದ್ದರು. ಡಾ.ಟಿ.ಡಿ.ಶಶಿಕಲಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಐಸಿಸಿ ಅಧ್ಯಕ್ಷೆ ಡಾ.ಕೆ.ಪ್ರಭಾ ವಂದಿಸಿದರು.