ಮದುವೆ ಆಗುವುದಾಗಿ ಲೈಂ*ಕ ಶೋಷಣೆ :ಇನ್‌ಸ್ಪೆಕ್ಟರ್‌ ವಿರುದ್ಧ ಮಹಿಳೆಯಿಂದ ದೂರು

| N/A | Published : Oct 24 2025, 02:00 AM IST / Updated: Oct 24 2025, 09:58 AM IST

KSRP
ಮದುವೆ ಆಗುವುದಾಗಿ ಲೈಂ*ಕ ಶೋಷಣೆ :ಇನ್‌ಸ್ಪೆಕ್ಟರ್‌ ವಿರುದ್ಧ ಮಹಿಳೆಯಿಂದ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ವಿವಾಹವಾಗುವುದಾಗಿ ನಂಬಿಸಿ ತನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮುಸ್ಲಿಂ ಮಹಿಳೆ ದೂರು ನೀಡಿದ್ದಾರೆ.

 ಬೆಂಗಳೂರು :  ವಿವಾಹವಾಗುವುದಾಗಿ ನಂಬಿಸಿ ತನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮುಸ್ಲಿಂ ಮಹಿಳೆ ದೂರು ನೀಡಿದ್ದಾರೆ.

ಡಿ.ಜೆ.ಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ಮೇಲೆ ಆರೋಪ ಬಂದಿದ್ದು, ಎರಡು ದಿನಗಳ ಹಿಂದೆ ಡಿಜಿಪಿ ಕಚೇರಿಗೆ ತೆರಳಿ ಸಂತ್ರಸ್ತೆ ದೂರು ನೀಡಿದ್ದಾರೆ. ಈ ದೂರು ಪರಿಶೀಲಿಸಿ ಮುಂದಿನ ಕ್ರಮಕ್ಕೆ ನಗರ ಪೊಲೀಸ್ ಆಯುಕ್ತರಿಗೆ ಡಿಜಿಪಿ ಕಚೇರಿ ಕಳುಹಿಸಿದೆ ಎಂದು ತಿಳಿದು ಬಂದಿದೆ.

ಒಂದೂವರೆ ವರ್ಷದ ಹಿಂದೆ ವಂಚನೆ ಸಂಬಂಧ ದೂರು ನೀಡಲು ಡಿ.ಜೆ.ಠಾಣೆಗೆ ತೆರಳಿದ್ದೆ. ಆಗ ನನಗೆ ಇನ್ಸ್‌ಪೆಕ್ಟರ್ ಸುನೀಲ್ ಅವರ ಪರಿಚಯವಾಯಿತು. ಆ ವೇಳೆ ಹಣ ಮರಳಿ ಕೊಡಿಸುವುದಾಗಿ ಅವರು ಭರವಸೆ ಕೊಟ್ಟಿದ್ದರು. ಇದಾದ ನಂತರ ನನಗೆ ಗುಡ್ ಮಾರ್ನಿಂಗ್‌, ಗುಡ್‌ ನೈಟ್ ಮೆಸೇಜ್ ಮಾಡೋದು, ಆಗಾಗ್ಗೆ ಕರೆ ಮಾಡಿ ಇನ್ಸ್‌ಪೆಕ್ಟರ್ ಮಾತನಾಡುತ್ತಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.

ನನ್ನ ವೈಯಕ್ತಿಕ ಜೀವನ ಕುರಿತು ಸುನೀಲ್ ವಿಚಾರಿಸಿದರು. ಆಗ ನನ್ನ ಪ್ರೇಮ ವೈಫಲ್ಯದ ಬಗ್ಗೆ ತಿಳಿಸಿದೆ. ಅಲ್ಲದೆ ಪ್ರೀತಿಸಿದವನಿಂದ ದೂರವಾದ ಬಳಿಕ ಮದುವೆ ಮಾಡಿಕೊಳ್ಳದಂತೆ ನಿರ್ಧರಿಸಿದ್ದೇನೆ. ಆಗ ನೀನು ಯಾರ ಸಂಪರ್ಕಕ್ಕೆ ಹೋಗಬೇಡ. ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ. ರಿಜಿಸ್ಟ್ರರ್ ಮ್ಯಾರೇಜ್ ಆಗೋಣ ಎಂದು ಸುನೀಲ್ ವಾಗ್ದಾನ ಮಾಡಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ನಡೆಸಿದರು. ಆದರೀಗ ಮದುವೆಗೆ ವಿರೋಧಿಸುತ್ತಿದ್ದಾರೆ. ಅಲ್ಲದೆ ವಿಡಿಯೋಗಳಿವೆ ಎಂದು ಬೆದರಿಸುತ್ತಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

Read more Articles on