ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾರ್ವಜನಿಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾರ್ವಜನಿಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರದ ನಗರಸಭೆ ಆವರಣದಲ್ಲಿ ಜನಸ್ಪಂದನ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವ ಸಲುವಾಗಿ, ಜನರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ನೀಡುವ ಅಥವಾ ಸಾಧ್ಯವಾಗದಿದ್ದರೆ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಪಿಎಂ ಅವಾಸ್ ಯೋಜನೆ ಅಡಿಯಲ್ಲಿ 774 ಮನೆಗಳಲ್ಲಿ 2021-22ನೇ ಸಾಲಿನ ಹೆಚ್ಚುವರಿಯಾಗಿ ಮಂಜೂರಾದಮನೆಗಳಿಗೆ ರಾಜ್ಯದಿಂದ ₹10.88 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ, 5 ವರ್ಷಗಳಿಂದ ಕೇಂದ್ರ ಸರ್ಕಾರದಿಂದ 11.61 ಕೋಟಿ ರು. ಮನೆಗಳಿಗೆ ಅನುದಾನ ಬಾಕಿ ಉಳಿಸಿಕೊಂಡಿದೆ. ಸಾಲಸೋಲ ಮಾಡಿ ರಾಜ್ಯ ಸರ್ಕಾರದಿಂದ ಬಂದ ಅನುದಾನ ಬಳಸಿಕೊಂಡು ಕೆಲವರು ಮನೆಗಳನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ಹಣಕಾಸಿನ ತೊಂದರೆಯಿಂದ ಹಾಗೆ ಬಿಟ್ಟಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭ ಪೌರಾಯುಕ್ತ ಕೆ.ಜೀವನ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ಪರಿಸರ ಅಭಿಯಂತರ ಹರೀಶ್ ಸಜ್ಜನ್‌ಶೆಟ್ಟಿ, ಎಇಇ ನಾನಾಸಾಬ್, ಜೆಇ ವಿಶ್ವನಾಥ ಸಹಿತ ಸಿಬ್ಬಂದಿ ಇದ್ದರು.
ನೀರಿನ ಕೊರತೆಯಿಲ್ಲ; ಆರು ತಿಂಗಳ ಮುಂಚೆ ಮಳೆ ಕೊರತೆಯ ಬಗ್ಗೆ ಹವಾಮಾನ ಇಲಾಖೆ ತಿಳಿಸಿದ್ದು. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಎರಡೂ ಜಲಾಶಯಗಳು ಭರ್ತಿಯಾಗಿವೆ. ಮೊದಲನೇ ಬೆಳೆ, ಕುಡಿಯುವ ನೀರಿಗೆ ಸದ್ಯ ಯಾವ ಸಮಸ್ಯೆ ಇಲ್ಲ. ನವೆಂಬರ್‌ನಲ್ಲಿ ಹೆಚ್ಚಿನ ಮಳೆಯಾಗಿ ಜಲಾಶಯಗಳು ಭರ್ತಿಯಾದರೆ ಮುಂದೆ ಜನರಿಗೆ ಅನುಕೂಲವಾಗಲಿದೆ. ಸಮಯಕ್ಕೆ ಸರಿಯಾಗಿ ಮಳೆಯಾದರೆ ರೈತರಿಗೆ ತೊಂದರೆಯಾಗುವುದಿಲ್ಲ. ಹತ್ತಿಗೂ ರೋಗದ ಭೀತಿ ಎಂದು ರೈತರು ಹೇಳುತ್ತಿದ್ದು, ನೀರಾವರಿ ಪ್ರದೇಶದಲ್ಲಿ ಸಹ ಹತ್ತಿ ನಾಶವಾಗಿವೆ. ಸರ್ಕಾರ ರೈತರ ಪರವಾಗಿ ಇದೆ. ಕಾಲಮಿತಿಯೊಳಗೆ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸೂಚಿಸಿದರು.