ಸಾರಾಂಶ
ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಈಚೆಗೆ ಜರುಗಿತು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಈಚೆಗೆ ಜರುಗಿತು. ಮುಖ್ಯ ಕಾರ್ಯನಿರ್ವಾಹಕ ಎ.ಜೆ. ಕೊತವಾಲ ವರದಿ ಮಂಡಿಸಿ ಮಾತನಾಡಿ, ಸಂಘ 2120 ಸದಸ್ಯರನ್ನು ಹೊಂದಿದ್ದು, ₹46.70 ಲಕ್ಷ ಷೇರು ಬಂಡವಾಳ, ।₹68.48 ಲಕ್ಷ ಠೇವಣಿ ಹೊಂದಿದೆ. 2023ರ ಆರ್ಥಿಕ ಸಾಲಿನಲ್ಲಿ ಸಂಘಕ್ಕೆ ₹8.86 ಲಕ್ಷ ಲಾಭವಾಗಿದ್ದು, ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಸಪ್ಪ ಪಾಟೀಲ, ನಿರ್ದೇಶಕರಾದ ಕರೆಪ್ಪ ಬಿರನೊಳಿ, ಹಣಮಂತ ದಾಸ, ಬಸಪ್ಪ ಪೂಜೇರಿ, ಮಾರುತಿ ಹಂಚಿನಮನಿ, ಸತ್ತೆಪ್ಪಹಾಲಾಯಿ, ಬಸವ್ವ ಹರಗಾಪುರಿ, ಮಲಗಂಗವ್ವ ಗಡಕರಿ, ಮಹ್ಮದಮಝರ ಖತೀಬ, ಪರಶುರಾಮ ಸೂರ್ಯವಂಶಿ, ಬಸಪ್ಪ ಪಾಟೀಲ, ದಸ್ತಗಿರ ಮದಾರಸಾಬ ವಂಟಿಗಾರ, ಶಿವಪ್ಪ ಡೊಣಪಾಟೀಲ ಹಾಗೂ ರೈತರು ಇದ್ದರು.