ಸಾರಾಂಶ
Shahpur: Eid Milad celebration of spirituality
ಶಹಾಪುರ: ಮುಸ್ಲಿಂ ಬಾಂಧವರು ಈದ್ ಮಿಲಾದ್ ದಿನದಂದು ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಮಹ್ಮದ್ ಪೈಗಂಬರ ಜನ್ಮದಿನವನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ಪ್ರವಾದಿ ಮಹ್ಮದ್ ಪೈಗಂಬರ ಅವರನ್ನು ಆರಾಧಿಸುವ ಹಬ್ಬ ಈದ್ ಮಿಲಾದ್ ಪವಿತ್ರ ದಿನವೆನಿಸಿದೆ. ಇಡೀ ಜಗತ್ತಿಗೆ ಶಾಂತಿ, ಸಹಬಾಳ್ವೆ ಪ್ರತಿಪಾದಿಸಿದ ಮಹಾನ್ ವ್ಯಕ್ತಿಯಾಗಿದ್ದ ಅವರ ಶಾಂತಿ ಮಂತ್ರವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿ, ಸಹೋದರತ್ವದಿಂದ ಬದುಕಬೇಕು. ದ್ವೇಷ ಬಿಡು ಪ್ರೀತಿ ಕೊಡು ಎನ್ನುವ ತತ್ವದಲ್ಲಿ ಪರಸ್ಪರ ಬದುಕೋಣ ಎಂದು ಮುಸ್ಲಿಂ ಧರ್ಮಗುರು ಮಹ್ಮದ್ ಪೈಗಂಬರರ ಸಂದೇಶ ಸಾರಿದರು.ಮೈಕ್‌ಸೆಟ್, ಹಸಿರು ಧ್ವಜದ ಚಿತ್ತಾರ, ಮುಗಿಲು ಮುಟ್ಟಿದ ಅಲ್ಲಾಹು ಘೋಷಣೆಗಳು ಮೆರವಣಿಗೆಯ ಅದ್ಧೂರಿತನವನ್ನು ಹೆಚ್ಚು ಮಾಡಿತ್ತು. ಈ ಬೃಹತ್ ಮೆರವಣಿಗೆಯಲ್ಲಿ ಒಂಟೆ, ಕುದುರೆ ಸವಾರಿ ನೋಡುಗರನ್ನು ಆಕರ್ಷಿಸಿದವು. ಮೆರವಣಿಗೆ ಸಾಗುವ ರಸ್ತೆಯಲ್ಲಿ ಕೆಲವು ಕಡೆ ಶರಬತ್, ನೀರು, ಸಿಹಿ ಉಪಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಮೆರವಣಿಗೆಯು ನಗರದ ಸಿಪಿಎಸ್ ಸಾಲ ಮೈದಾನದಿಂದ ಹಳೆ ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಮಾರುತಿ ರಸ್ತೆ ಮೂಲಕ ಹಾದು ಆಸರ್ ಮೊಹಲ್ಲದವರೆಗೆ ಹೋಗುವಾಗ ಹಿಂದೂ ಧರ್ಮದವರು ಬರಮಾಡಿಕೊಂಡು ಹಬ್ಬದ ಶುಭ ಕೋರಿದರು. ಸೌಹಾರ್ದತೆ, ಭಾವೈಕ್ಯತೆ ಮೆರೆದರು.----
18ವೈಡಿಆರ್6ಶಹಾಪುರ ನಗರದ ಪ್ರಮುಖ ಬೀದಿಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಭವ್ಯ ಮೆರವಣಿಗೆ ನಡೆಯಿತು.