ಕೆಪಿ5ಎಎನ್‌ಡಿ1ಇಪಿ:ಈಚೆಗೆ ಬೆಂಗಳೂರಿನಲ್ಲಿ ನಡೆದ ಪುರಸ್ಕಾರ ಸಮಾರಂಭದಲ್ಲಿ ಶಕುನವಳ್ಳಿ ಗ್ರಾಮಪಂಚಾಯಿತಿಯ ಪಿಡಿಒ ಎನ್.ಸುಮಾ, ಮಾಜಿ ಅಧ್ಯಕ್ಷೆ ಶಾಂತಮ್ಮ, ಈಗಿನ ಅಧ್ಯಕ್ಷೆ ಶಂಶುದ್ ಭಾನು, ಉಪಾಧ್ಯಕ್ಷ ರಮೇಶ್ ನಡಗೇರ್ ಹಾಗೂ ಸದಸ್ಯರು ಸಚಿವ ಪ್ರಯಾಂಕ ಖರ್ಗೆ ಅವರಿಂದ ಗಾಂಧಿಗ್ರಾಮ ಪುರಸ್ಕಾರ ಪಡೆದುಕೊಂಡರು. | Kannada Prabha
Image Credit: KP
2022- 23ರ ಗಾಂಧಿಗ್ರಾಮ ಪುರಸ್ಕಾರ
ಆನವಟ್ಟಿ: ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಜಾರಿಗೆ ತಂದಿರುವ ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆ, ಸ್ವಚ್ಛ ಭಾರತ ಅಭಿಯಾನ ಮುಂತಾದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಶಕುನವಳ್ಳಿ ಗ್ರಾಮ ಪಂಚಾಯಿತಿಗೆ 2022- 23ರ ಗಾಂಧಿಗ್ರಾಮ ಪುರಸ್ಕಾರ ಲಭಿಸಿದೆ. ಅತ್ಯುತ್ತಮ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಗೆ ನೀಡುವ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಈಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಶಕುನವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಮ್ಮ ಹಾಗೂ ಈಗಿನ ಅಧ್ಯಕ್ಷೆ ಶಂಶುದ್ ಬಾನು, ಪಂಚಾಯಿತಿ ಸದಸ್ಯರು, ಪಿಡಿಒ ಎನ್. ಸುಮಾ ಪುರಸ್ಕಾರವನ್ನು ಪಡೆದುಕೊಂಡರು. ನರೇಗಾ ಯೋಜನೆಯಲ್ಲಿ 16910 ಮಾನವ ದಿನಗಳ ಗುರಿಯನ್ನು ಪಂಚಾಯಿತಿಗೆ ನೀಡಲಾಗಿತ್ತು. ಆದರೆ 24521 ಮಾನವ ದಿನಗಳ ಕೂಲಿ ಸೃಷ್ಠಿಸಿ, ಗ್ರಾಮೀಣ ಜನರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗಿದೆ. - - - ಕೋಟ್ಸ್ ಸೊರಬ ತಾಲೂಕಿನಲ್ಲಿ 35 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ ಗಡಿ ಭಾಗದಲ್ಲಿರುವ ಶಕುನವಳ್ಳಿ ಗ್ರಾಮ ಪಂಚಾಯಿತಿಗೆ ಗಾಂಧಿಗ್ರಾಮ ಪುರಸ್ಕಾರ ಸಿಕ್ಕಿರುವುದು ಶ್ಲಾಘನೀಯ - ಪ್ರದೀಪ ಕುಮಾರ್, ಇಒ, ಸೊರಬ ತಾಪಂ - - - ನಾವು ಸರ್ಕಾರದ ಸಂಪೂರ್ಣ ಸೌಲಭ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಪಂಚಾಯಿತಿಯಲ್ಲಿ ಆಗಿರುವ ಉತ್ತಮ ಕೆಲಸಗಳನ್ನು ಪರಿಗಣಿಸಿ ಪುರಸ್ಕಾರ ನೀಡಿರುವುದು, ಮುಂದೆ ಇನ್ನೂ ಹೆಚ್ಚಿ ಕೆಲಸ ಮಾಡಲು ಮತ್ತು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸ್ಪೂರ್ತಿಯಾಗಿದೆ -ಎನ್. ಸುಮಾ, ಪಿಡಿಒ - - - -ಕೆಪಿ5ಎಎನ್‌ಡಿ1ಇಪಿ: ಬೆಂಗಳೂರಿನಲ್ಲಿ ನಡೆದ ಪುರಸ್ಕಾರ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಕುನವಳ್ಳಿ ಗ್ರಾಪಂಗೆ ಗಾಂಧಿಗ್ರಾಮ ಪುರಸ್ಕಾರ ನೀಡಿದರು. ಪಿಡಿಒ ಎನ್.ಸುಮಾ, ಮಾಜಿ ಅಧ್ಯಕ್ಷೆ ಶಾಂತಮ್ಮ, ಈಗಿನ ಅಧ್ಯಕ್ಷೆ ಶಂಶುದ್ ಬಾನು, ಉಪಾಧ್ಯಕ್ಷ ರಮೇಶ್ ನಾಡಿಗೇರ್ ಹಾಗೂ ಸದಸ್ಯರು ಪುರಸ್ಕಾರ ಸ್ವೀಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.