ಸಜ್ಜನ ಮತ್ತು ಕಳಂಕರಹಿತ ರಾಜಕಾರಣಿ ಮತ್ತು ಶಿಕ್ಷಣ ಕ್ಷೇತ್ರದ ಭೀಷ್ಮರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಸರ್ವಾಂಗೀಣ ಬದುಕಿನ ನಡೆ ಇಂದಿನ ರಾಜಕಾರಣಿಗಷ್ಟೇ ಅಲ್ಲದೇ ಸಾಮಾನ್ಯರಿಗೂ ಪ್ರೇರಣೆಯಾಗಿದೆ ಎಂದು ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣದ ಕಾನುಕೇರಿ ಮಠದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸೊರಬ ತಾಲೂಕು ಘಟಕ ವತಿಯಿಂದ ಲಿಂಗೈಕ್ಯರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಶಾಮನೂರು ಶಿವಶಂಕರಪ್ಪ ಅವರು ಎಲ್ಲಾ ಜಾತಿ, ಧರ್ಮ, ಸಮಾಜದವರನ್ನು ಪ್ರೀತಿಯಿಂದ ಕಂಡ ಆದರ್ಶ ವ್ಯಕ್ತಿಯಾಗಿದ್ದರು. ಈ ಕಾರಣದಿಂದ ಅವರು ಎಲ್ಲಾ ಪಕ್ಷದವರಿಗೂ ಮತ್ತು ಎಲ್ಲಾ ಧರ್ಮದವರಿಗೂ ಅವಿಸ್ಮರಣೀಯರು. ಅವರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಯಲ್ಲಿ ಮಹಾನ್ ವ್ಯಕ್ತಿಗಳನ್ನು ರೂಪಿಸಿದ್ದಾರೆ ಎಂದರು. ಅವರು ಬಯಸಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದರು. ಆದರೆ ಅಧಿಕಾರದ ಆಸೆಗಾಗಿ ರಾಜಕಾರಣ ಮಾಡುವ ಲಾಲಾಸೆಯನ್ನು ಎಂದಿಗೂ ರೂಪಿಸಿಕೊಳ್ಳಲಿಲ್ಲ ಎಂದ ಅವರು, ನಾಡಿನ ಶೈಕ್ಷಣಿಕ ಪ್ರಗತಿಗೆ ಅವರು ಸ್ಥಾಪಿಸಿದ ಸಂಘ-ಸಂಸ್ಥೆಗಳ ಕೊಡುಗೆ ಅನನ್ಯವಾಗಿದೆ ಎಂದರು.

ಸಂತಾಪ ಸೂಚಕ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಗುರುಕುಮಾರ ಎಸ್. ಪಾಟೀಲ್, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ವಿ. ಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ್ರು ಅಂಕರವಳ್ಳಿ, ಅಶೋಕ್ ನಾಯಕ್ ಅಂಡಿಗೆ, ರೈತ ಸಂಘದ ಮುಖಂಡ ಉಮೇಶ್ ಪಾಟೀಲ್, ದಯಾನಂದ ಗೌಡ್ರು ತ್ಯಾವಗೋಡು, ನಟರಾಜ್ ಉಪ್ಪಿನ, ಕೆ.ಜಿ. ಲೋಲಾಕ್ಷಮ್ಮ, ಸಿ.ಪಿ. ವೀರೇಶ್ ಗೌಡ್ರು, ಚಂದ್ರಶೇಖರ ನಿಜಗುಣ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಗುರುಪ್ರಸನ್ನಗೌಡ ಸೇರಿದಂತೆ ಮೊದಲಾದವರಿದ್ದರು.