ಓರ್ವ ವ್ಯಕ್ತಿ ಸಮಾಜದಲ್ಲಿ ಶಕ್ತಿಯಾಗಿ ಬೆಳೆಯಬಹುದು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಧೀಮಂತ ನಾಯಕನ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಠ ಎಂದರು.ರಾಜಕೀಯದ ಜತೆಗೆ ಸಮಾಜ ಸೇವೆಯನ್ನೆ ತಮ್ಮ ಉಸಿರಾಗಿಸಿಕೊಂಡಿದ್ದ ದಿವಂಗತರು ದಾವಣಗೆರೆಯ ಕೀರ್ತಿ ಜಗದಗಲಕ್ಕೆ ಪಸರಿಸುವಂತೆ ಮಾಡಿದ ಮಹಾನುಭಾವ ಎಂದು ಕೊಂಡಾಡಿದರಲ್ಲದೆ, ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ಬಡ ಕುಟುಂಬಗಳಿಗೆ ಆಸರೆಯಾಗಿ ಬದುಕು ರೂಪಿಸಿದ್ದ ಅವರ ಹೆಸರು ಇತಿಹಾಸದ ಪುಟದಲ್ಲಿ ಅಜರಾಮರವಾಗಲಿ.

ಕನ್ನಡಪ್ರಭ ವಾರ್ತೆ ಕೆ.ಆರ್‌. ನಗರ

ಕಾಂಗ್ರೆಸ್ ಪಕ್ಷದ ಮುತ್ಸದ್ದಿ ನಾಯಕರು ಆಗಿದ್ದ ದೇಶದ ಅತ್ಯಂತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಜೀವನ ಮತ್ತು ಸಾಧನೆ ನಾಡಿಗೆ ಮಾದರಿ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ಹೇಳಿದರು.

ಪಟ್ಟಣದ ಮುಳ್ಳೂರು ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಿಧನರಾದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಓರ್ವ ವ್ಯಕ್ತಿ ಸಮಾಜದಲ್ಲಿ ಶಕ್ತಿಯಾಗಿ ಬೆಳೆಯಬಹುದು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಧೀಮಂತ ನಾಯಕನ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಠ ಎಂದರು.

ರಾಜಕೀಯದ ಜತೆಗೆ ಸಮಾಜ ಸೇವೆಯನ್ನೆ ತಮ್ಮ ಉಸಿರಾಗಿಸಿಕೊಂಡಿದ್ದ ದಿವಂಗತರು ದಾವಣಗೆರೆಯ ಕೀರ್ತಿ ಜಗದಗಲಕ್ಕೆ ಪಸರಿಸುವಂತೆ ಮಾಡಿದ ಮಹಾನುಭಾವ ಎಂದು ಕೊಂಡಾಡಿದರಲ್ಲದೆ, ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ಬಡ ಕುಟುಂಬಗಳಿಗೆ ಆಸರೆಯಾಗಿ ಬದುಕು ರೂಪಿಸಿದ್ದ ಅವರ ಹೆಸರು ಇತಿಹಾಸದ ಪುಟದಲ್ಲಿ ಅಜರಾಮರವಾಗಲಿ ಎಂದು ಹಾರೈಸಿದರು.

ತನ್ನ ಹುಟ್ಟೂರಾದ ದಾವಣಗೆರೆಗೆ ಕರ್ನಾಟಕದ ಆಕ್ಸ್‌ಫರ್ಡ್‌ ಎಂಬ ಹೆಸರು ಬರುವಂತೆ ಮಾಡಿ ಶಿಕ್ಷಣ ಕ್ರಾಂತಿ ಮಾಡಿದ ಶಾಮನೂರು ಶಿವಶಂಕರಪ್ಪ ಅವರು ಹಿಡಿದ ಕೆಲಸವನ್ನು ಹಠ ಬಿಡದೆ ಸಾಧಿಸುವ ಛಲಗಾರರಾಗಿದ್ದರಲ್ಲದೆ ಸ್ಫೂರ್ತಿಯ ಚಿಲುಮೆಯಾಗಿ ಕೆಲಸ ಮಾಡುಿದ್ದ ಸಾಧಕ ಎಂದು ಅವರು ಕೊಂಡಾಡಿದರು.

ಆರು ಭಾರಿ ಶಾಸಕರು, ಒಮ್ಮೆ ಸಂಸದರಾಗುವುದರ ಜತೆಗೆ ಸಿದ್ದರಾಮಯ್ಯನವರ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿಯೂ ಸಮರ್ಥವಾಗಿ ಕೆಲಸ ನಿರ್ವಹಿಸಿದ ದಿವಂಗತರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಬಾವುಕರಾಗಿ ನುಡಿದರು.

ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕಾಂಗ್ರೆಸ್ ಸಹಕಾರ ವಿಭಾಗದ ಅಧ್ಯಕ್ಷ ತೇಜೋಮೂರ್ತಿ, ಲಾಳನಹಳ್ಳಿ ಗ್ರಾಪಂ ಸದಸ್ಯ ಉಮೇಶ್, ಕರ್ನಾಟಕ ಅಹಿಂದ ಜನ ಸಂಘದ ಜಿಲ್ಲಾಧ್ಯಕ್ಷ ಪಿ. ಮಹದೇವ್, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಷರೀಫ್, ಖಾಲಿದ್‌ ಪಾಷಾ, ಮುಜಮಿಲ್, ಚೀರನಹಳ್ಳಿ ಕುಮಾರ್‌ ಇದ್ದರು.