ಸಾರಾಂಶ
ಲೋಕಾಪುರ: ಪಟ್ಟಣದ ವೆಂಕಟೇಶ್ವನಗರದ ಬ್ರಹ್ಮಲೀನ ಶಂಭುಲಿಂಗಾನಂದ ಸ್ವಾಮಿಗಳ 26ನೆಯ ಪುಣ್ಯಾರಾಧನೆ ಪ್ರಯುಕ್ತ ಶನಿವಾರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಕಾಡರಕೊಪ್ಪದ ನ್ಯಾಯವೇಂದಾಂತಾಚಾರ್ಯರ ದಯಾನಂದ ಸರಸ್ವತಿ ಮಹಾಸ್ವಾಮೀಜಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಶಂಭುಲಿಂಗಾನಂದ ಆಶ್ರಮದಿಂದ ಹೊರಟ ಅಲಂಕೃತಗೊಂಡ ಪಲ್ಲಕ್ಕಿ ಉತ್ಸವ ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು, ಸಮಾಳ, ನೆರೆದಿದ್ದ ಜನರ ಗಮನ ಸೆಳೆಯಿತು. ಸುಮಂಗಲೆಯರು ಆರತಿಯೊಂದಿಗೆ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ವೆಂಕಟೇಶ್ವನಗರದ ಬ್ರಹ್ಮಲೀನ ಶಂಭುಲಿಂಗಾನಂದ ಸ್ವಾಮಿಗಳ 26ನೆಯ ಪುಣ್ಯಾರಾಧನೆ ಪ್ರಯುಕ್ತ ಶನಿವಾರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.ಕಾಡರಕೊಪ್ಪದ ನ್ಯಾಯವೇಂದಾಂತಾಚಾರ್ಯರ ದಯಾನಂದ ಸರಸ್ವತಿ ಮಹಾಸ್ವಾಮೀಜಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಶಂಭುಲಿಂಗಾನಂದ ಆಶ್ರಮದಿಂದ ಹೊರಟ ಅಲಂಕೃತಗೊಂಡ ಪಲ್ಲಕ್ಕಿ ಉತ್ಸವ ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು, ಸಮಾಳ, ನೆರೆದಿದ್ದ ಜನರ ಗಮನ ಸೆಳೆಯಿತು. ಸುಮಂಗಲೆಯರು ಆರತಿಯೊಂದಿಗೆ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಮೂರು ದಿನಗಳವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ರಾಮಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಮತ್ತು ಕೃಷ್ಣಾ ರಂಗಣ್ಣವರ, ಮಂಜುಳಾ ಸಂಬಾಳದ, ಲಾವಣ್ಯಾ ರಂಗಣ್ಣವರ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿದವು.ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವದ ವೇಳೆ ಭಕ್ತರಿಂದ ಭಜನೆ ಹಾಗೂ ಪ್ರವಚನ ಕಾರ್ಯಕ್ರಮ ಜರುಗಿದವು. ಪುಣ್ಯಾರಾಧನೆಯಲ್ಲಿ ಭಾಗಿಯಾದ ಭಕ್ತರಿಗೆ ಹಾಲುಹುಗ್ಗಿ, ಮಾದೇಲಿ, ಹೋಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಪರಮರಾಮಾರೂಢ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಪ್ರವಚನಕಾರ ಲಕ್ಷ್ಯಾನಟ್ಟಿ ಗ್ರಾಮದ ಜ್ಞಾನ ಯೋಗಾಶ್ರಮದ ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸದ್ಭಕ್ತ ಮಂಡಳಿಯ ಬಸವರಾಜ ಪಾಟೀಲ, ಡಿ.ಆರ್. ದಾಸರಡ್ಡಿ, ವಿಷ್ಣಗೌಡ ಪಾಟೀಲ, ಅಣ್ಣಪ್ಪ ಕೋರಿ, ಸದಾಶಿವ ಹಗ್ಗದ, ನಾರಾಯಣ ಪೋಲಿಸ್ ಪಾಟೀಲ, ಬಸವರಾಜ ಉದಪುಡಿ, ವೆಂಕಣ್ಣ ಮುಳ್ಳೂರ, ರವಿ ಬೋಳಿಶೆಟ್ಟಿ, ಸುರೇಶ ಅಂಗಡಿ ವೆಂಕಟೇಶ್ವರ ನಗರದ ಹಾಗೂ ಲೋಕಾಪುರದ ಮಠದ ಭಕ್ತ ಮಂಡಳಿ ಇದ್ದರು.