ಭಾರತೀಯ ಜನ ಸಾಮ್ರಾಟ್ ಪಾರ್ಟಿಯಿಂದ ಶಾಮರಾವ್ ಮೇದಾರ್ ನಾಮಪತ್ರ

| Published : Apr 13 2024, 01:02 AM IST

ಸಾರಾಂಶ

ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚುನಾವಣಾಧಿಕಾರಿಗಳ (ಡಿಸಿ) ಕಚೇರಿಗೆ ಆಗಮಿಸಿದ ಕಲಬುರಗಿಯ ಶಾಮರಾವ್ ಮೇದಾರ್ ಅವರು ಭಾರತೀಯ ಜನ ಸಾಮ್ರಾಟ್ ಪಾರ್ಟಿಯಿಂದ ಚುನಾವಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಅವರಿಗೆ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಈಗಾಗಲೇ ಘೋಷಣೆಗೊಂಡಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಎರಡನೇ ಹಂತದ ಮತದಾನದ ವ್ಯಾಪ್ತಿಗೆ ಬರುತ್ತಿರುವ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಿರುವ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ವೇಳಾಪಟ್ಟಿ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೇ ನಿರಸವಾಗಿ ಆರಂಭಗೊಂಡಿದ್ದು ಮೊದಲ ದಿನ ಕೇವಲ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರಗಳನ್ನು ಉಮೇದುದಾರರು ಅಥವಾ ಸೂಚಕರು ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕಗೆ ಕಲಬುರಗಿ ಶಾಮರಾವ್ ಮೇದಾರ್ ಭಾರತೀಯ ಜನ ಸಾಮ್ರಾಟ್ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ಉಮೇದುದಾರರ ಸೂಚಕರು ಉಪಸ್ಥಿತರಿದ್ದರು. ಶುಕ್ರವಾರದಿಂದ ಆರಂಭಗೊಂಡಿರುವ ನಾಮಪತ್ರ ಸಲ್ಲಿಕೆ ಕಾರ್ಯವು ಎ.19 ರ ವರೆಗೆ ನಡೆಯಲಿದೆ.

ಬಿಗಿ ಭದ್ರತೆ:ಲೋಕಸಭಾ ಚುನಾವಣೆ ನಾಮತ್ರ ಸಲ್ಲಿಕೆ ಪ್ರಕ್ರಿಯೇ ಶುರುವಾಗಿದ್ದರಿಂದ ಚುನಾವಾಣಧಿಕಾರಿಗಳ ಕಚೇರಿಯಾಗಿರುವ ಜಿಲ್ಲಾಧಿಕಾರಿ ಕಚೇರಿ ಸುತ್ತಲು ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪೊಲೀಸ್‌ ಹಾಗೂ ಸೇನೆ ಸಿಬ್ಬಂದಿ ಕಚೇರಿ ಸುತ್ತಲು ಭದ್ರತೆ ಕೊಟ್ಟರು. ಬಿರು ಬಿಸಿಲು ಹಿನ್ನೆಲೆ ಡಿಸಿ ಕಚೇರಿ ಆವರಣದಲ್ಲಿ ನೆರಳಿನ ವ್ಯವಸ್ಥೆ ಸಹ ಮಾಡಲಾಯಿತು. ಮುಂದಿನ ವಾರದಲ್ಲಿ ಕಾಂಗ್ರೆಸ್‌,ಬಿಜೆಪಿ ಸೇರಿ ಇತರೆ ಪಕ್ಷಗಳಿಂದ ಉಮೇದುವಾರಿಕೆಗಳು ಸಲ್ಲಿಕೆಯಾಗಲಿದ್ದು, ಬರುವ ಎ.20 ಶನಿವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ಜರುಗಲಿದ್ದು, 22 ರೊಳಗೆ ನಾಮಪತ್ರ ವಾಪಸ್ಸು ಪಡೆಯಬಹುದಾಗಿದೆ. ಮೇ.7 ಕ್ಕೆ ಮತದಾನ ಅದೇ ರೀತಿ ಜೂ.4 ಕ್ಕೆ ಮತ ಎಣಿಕೆ ಎಣಿಕೆ ಜರುಗಲಿದೆ.