ಸಾರಾಂಶ
ತುಮಕೂರು: ನಗರದ ಅಮರಜ್ಯೋತಿ ನಗರದಲ್ಲಿ ಜೈಷ್ಠಾದೇವಿ ಸಮೇತ ಶನೈಶ್ಚರಸ್ವಾಮಿ 14 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮೊದಲನೆಯ ಶ್ರಾವಣ ಮಾಸದ ಪ್ರಯುಕ್ತ ಶ್ರಾವಣ ಶನಿವಾರದ ಬೆಳಗ್ಗೆಯಿಂದ ದೇವಸ್ಥಾನದ ಸನ್ನಿಧಿಯಲ್ಲಿ ಗುರುಪ್ರಾರ್ಥನೆ, ಸಂಕಲ್ಪ, ಗಣಪತಿ ಪೂಜೆ, ನವಗ್ರಹ ಪೂಜೆ, ಕಲಶ ಸ್ಥಾಪನೆ, ಮಹಾಗಣಪತಿ ಹೋಮ, ದುರ್ಗಾ ಹೋಮ, ನವಗ್ರಹ ಹೋಮ ಮತ್ತು ಶನೈಶ್ಚರ ಹೋಮ ನಡೆಯಿತು. ಮಧ್ಯಾಹ್ನ ೧೨.೩೦ ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಮಹಾಪ್ರಸಾದ ಹಾಗೂ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಿತು.ಸನ್ನಿಧಿಯಲ್ಲಿ ಮಧ್ಯಾಹ್ನ 12 ರಿಂದ ಮಾರುತಿ ಭಜನಾ ಮಂಡಳಿ, ಅಭಯಪುರಿ ಪುಣ್ಯಕ್ಷೇತ್ರ, ಮೆಳೇಕೋಟೆ, ತುಮಕೂರು. ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 3 ರಿಂದ ಗೀತಾಂಜಲಿ ಮತ್ತು ಸಂಗಡಿಗರು ಹಾಗೂ ಸ್ಥಳೀಯ ಕಲಾವಿದರಿಂದ, ಭಾವಗೀತೆ, ಭಕ್ತಿಗೀತೆ ಮತ್ತು ರಂಗಗೀತೆಗಳ ಕಾರ್ಯಕ್ರಮ ಜರುಗಿತ್ತು. ಸಂಜೆ 7 ಗಂಟೆಯಿಂದ ಶ್ರೀ ಶನೈಶ್ಚರ ಸ್ವಾಮಿಗೆ ಮಹಾಮಂಗಳಾರತಿ, ತೀರ್ಥ ಮಹಾಪ್ರಸಾದ ವಿನಿಯೋಗ ನಡೆಯಿತು.ದೇವಸ್ಥಾನದ ವ್ಯವಸ್ಥಪಕರು ಬಿ.ಗೋವಿಂದರಾಜು, ನಿವೃತ್ತ ಜಿಲ್ಲಾಧಿಕಾರಿ ರಂಗಪ್ಪ, ಟಿಎಚ್‌ಎಸ್ ಬಾಬಣ್ಣ, ಸೀಡ್ಸ್ ವೆಂಕಟೇಶ, ಮಿಲಿಟರಿ ರಾಮಣ್ಣ, ಪಿ.ಎನ್ ಮಂಜುನಾಥ್ ಗೌಡ, ಮಲ್ಲೇಶ್ ರೆಡ್ಡಿ, ಮಾಸ್ಟರ್ ಹನುಮಂತರಾಯಪ್ಪ, ಟಿ.ಎನ್ ಕೃಷ್ಣಮೂರ್ತಿ, ಕಲ್ಲೇಶ್ ಇದ್ದರು.