ಶನಿದೇವರ ದೇವಸ್ಥಾನ ಲೋಕಾರ್ಪಣೆ

| Published : May 02 2025, 12:16 AM IST

ಸಾರಾಂಶ

ಕೇರಳಾಪುರ ಗ್ರಾಮದ ಕಾವೇರಿ ಎಡದಂಡೆಯ ಮೇಲೆ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಶನೇಶ್ವರದೇವರ ಶಿಲೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವುಜರುಗಿತು. ದೇವಸ್ಥಾನ ಪ್ರವೇಶದ ನಂತರ ಪೂಜಾದಿ ಕೈಂಕರ್ಯ, ನೂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಂತರ ರುದ್ರಬೀಷೆಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಹವನ, ಹೋಮ, ಅಷ್ಟದೇವರ ಪೂಜೆ ಇತ್ಯಾದಿಗಳನ್ನು ಅರ್ಚಕರಾದ ಅರುಣ್ ಕುಮರ್ ಶಾಸ್ತ್ರಿಗಳು ಮತ್ತು ತಂಡದವರು ನೇರವೇರಿಸಿದರು.

ಬಸವಾಪಟ್ಟಣ: ಸಮೀಪದ ಕೇರಳಾಪುರ ಗ್ರಾಮದ ಕಾವೇರಿ ಎಡದಂಡೆಯ ಮೇಲೆ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಶನೇಶ್ವರದೇವರ ಶಿಲೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವುಜರುಗಿತು. ದೇವಸ್ಥಾನ ಪ್ರವೇಶದ ನಂತರ ಪೂಜಾದಿ ಕೈಂಕರ್ಯ, ನೂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಂತರ ರುದ್ರಬೀಷೆಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಹವನ, ಹೋಮ, ಅಷ್ಟದೇವರ ಪೂಜೆ ಇತ್ಯಾದಿಗಳನ್ನು ಅರ್ಚಕರಾದ ಅರುಣ್ ಕುಮರ್ ಶಾಸ್ತ್ರಿಗಳು ಮತ್ತು ತಂಡದವರು ನೇರವೇರಿಸಿದರು. ಪೂಜಾದಿ ಕೈಂಕರ್ಯದಲ್ಲಿ ದೇವಸ್ಥಾನ ಮಂಡಳಿಯ ಸುರೇಶ್ ಅವರು ದೇವಸ್ಥಾನ ಮಂಡಳಿಯ ಸದಸ್ಯರು ಅಲ್ಲದೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಮಾಜಿ ಅದ್ಯಕ್ಷರು, ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿಸಿದರು. ದೇವಸ್ಥಾನ ಲೋಕಾರ್ಪಣೆಯನ್ನು ಅರಕಲಗೂಡು ಕ್ಷೇತ್ರದ ವಿಧಾನಸಭಾ ಸದಸ್ಯರಾದ ಎ ಮಂಜುರವರು ನೆರವೆರಿಸಿದರು. ಇದೇ ವೇಳೆ ಕೇರಳಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಗಂಗಾಮಣಿ, ಸದಸ್ಯರಾದ ಶಿವಣ್ಣ, ರವಿ, ಮಾಜಿ ಅಧ್ಯಕ್ಷ ಕರೀಗೌಡ, ಸದಸ್ಯರಾದ ರತ್ನ ಭಾಗವಹಿಸಿದ್ದರು.