ಕಸ್ತೂರಿ ರಂಗನ್‌ ವರದಿ ಕುರಿತು ಆಲೂರು ಸಿದ್ದಾಪುರ ವಿಶೇಷ ಗ್ರಾಮ ಸಭೆ ನಡೆಯಿತು. ಸೋಮವಾರಪೇಟೆ ಕಸ್ತೂರಿ ರಂಗನ್‌ ವರದಿ ಕುರಿತು ಆಲೂರು ಸಿದ್ದಾಪುರ ವಿಶೇಷ ಗ್ರಾಮ ಸಭೆ ನಡೆಯಿತು. ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೆಶಕ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು.

ಶನಿವಾರಸಂತೆ: ಕಸ್ತೂರಿ ರಂಗನ್‌ ವರದಿ ಕುರಿತು ಆಲೂರು ಸಿದ್ದಾಪುರ ವಿಶೇಷ ಗ್ರಾಮ ಸಭೆ ನಡೆಯಿತು. ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೆಶಕ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸ್ಥರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಗ್ರಾ.ಪಂ.ಸದಸ್ಯ ಎಚ್.ಎಸ್.ಪ್ರೇಮ್‌ನಾಥ್, ಕಸ್ತೂರಿ ರಂಗನ್ ವರದಿಯಲ್ಲಿರುವ ನಿಯಮಗಳಿಂದ ರೈತರಿಗೆ ನಾನಾರೀತಿಯಲ್ಲಿ ತೊಂದರೆಯಾಗಲಿದೆ. ಹೀಗಾಗಿ ೭ನೇ ಸುತ್ತಿನ ವರದಿಗೆ ನಮ್ಮ ಆಕ್ಷೇಪ ಇದ್ದು ಈ ವರದಿಯನ್ನು ತಿರಷ್ಕರಿಸಬೇಕು. ಅಧಿಕಾರಿಗಳು ಸಭೆಯಲ್ಲಿ ಜನರಿಂದ ವ್ಯಕ್ತವಾದ ಅಭಿಪ್ರಾಯವನ್ನು ಪಾರದರ್ಶಕವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ರೈತರು ಮತ್ತು ಸಾರ್ವಜನಿಕರಿಂದ ಕಸ್ತೂರಿ ರಂಗನ್ ವರದಿಯ ೭ನೇ ಸುತ್ತಿನ ಕರಡು ಮತ್ತು ನಿಯಮಗಳಿಗೆ ಆಕ್ಷೇಪವ್ಯಕ್ತವಾಗಿರುವ ಕುರಿತು ಅಧಿಕಾರಿಗಳು ನಿರ್ಣಯ ತೆಗೆದುಕೊಂಡರು. ಈ ಸಂದರ್ಭ ಗ್ರಾ.ಪಂ.ಪಿಡಿಒ ಚಂದ್ರಶೇಖರ್ ಗ್ರಾ.ಪಂ.ಕಾರ್ಯದರ್ಶಿ ಧರ್ಮಪ್ಪ ಮತ್ತು ಸಿಬ್ಬಂದಿ ಇದ್ದರು