ಸಾರಾಂಶ
ಉತ್ತರ ಕೊಡಗಿನ ಭಾಗದ ಅದ್ಧೂರಿ ಗೌರಿ ಗಣೇಶ ವಿಸರ್ಜನೋತ್ಸವ ಇದಾಗಿದ್ದು ಸೋಮವಾರಪೇಟೆ ತಾಲೂಕಿನ ಸಾವಿರಾರು ಭಕ್ತಾರು ಸಾಕ್ಷಿಗಳಾಗಲಿದ್ದಾರೆ. ಶನಿವಾರಸಂತೆ ಶ್ರೀ ವಿಜಯ ವಿನಾಯಕ ದೇವಸ್ಥಾನ ತ್ಯಾಗರಾಜ್ ಕಾಲೋನಿಯ ದೇವಸ್ಥಾನ ಸಮಿತಿಯವರು 34ನೇ ವರ್ಷದ ಗೌರಿ ಗಣೇಶ ಉತ್ಸವ ಆಚರಣೆ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿನ ತ್ಯಾಗರಾಜ್ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಸ್ಥಾನದ 34ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಲಿದೆ.ಉತ್ತರ ಕೊಡಗಿನ ಭಾಗದ ಅದ್ಧೂರಿ ಗೌರಿ ಗಣೇಶ ವಿಸರ್ಜನೋತ್ಸವ ಇದಾಗಿದ್ದು ಸೋಮವಾರಪೇಟೆ ತಾಲೂಕಿನ ಸಾವಿರಾರು ಭಕ್ತಾರು ಸಾಕ್ಷಿಗಳಾಗಲಿದ್ದಾರೆ. ಶ್ರೀ ವಿಜಯ ವಿನಾಯಕ ದೇವಸ್ಥಾನ ತ್ಯಾಗರಾಜ್ ಕಾಲೋನಿಯ ದೇವಸ್ಥಾನ ಸಮಿತಿಯವರು 34ನೇ ವರ್ಷದ ಗೌರಿ ಗಣೇಶ ಉತ್ಸವ ಆಚರಣೆ ಮಾಡುತ್ತಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಗೆ ದೇವಸ್ಥಾನದ ಅರ್ಚಕ ಮಂಜುನಾಥ್ ಶರ್ಮ ನೇತೃತ್ವದಲ್ಲಿ ಮಹಾಗಣಪತಿ ಹೋಮ ಮತ್ತು ಶಾಂತಿ ಹೋಮ ನಂತರ ಶ್ರೀ ವಿಜಯ ವಿನಾಯಕ ಸ್ವಾಮಿಗೆ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಯೋಗ ಕಾರ್ಯಕ್ರಮವಿರುತ್ತದೆ. ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಅನ್ನದಾಸೋಹ ಏರ್ಪಡಿಸಲಾಗಿದೆ.ಸಂಜೆ 6 ಗಂಟೆಯಿಂದ ಗೌರಿ ಗಣೇಶ ಮೂರ್ತಿಯನ್ನು ಕೊಣನೂರಿನ ಅನ್ನಪೂರ್ಣೇಶ್ವರಿ ಲೈಟಿಂಗ್ ವಿದ್ಯುತ್ ಅಲಂಕೃತ ಸ್ವರ್ಣರಥದಲ್ಲಿ ಇಟ್ಟು ಶೋಭಾಯಾತ್ರೆ ನಡೆಯಲಿದೆ.ವಂಶಿಕ ಆರ್ಟ್ಸ್ ತಂಡದವರಿಂದ ಕೀಲು ಕುದುರೆ ಮತ್ತು ಗೊಂಬೆ ಕುಣಿತ, ಹಿಂದೂ ಫೈರ್ ಬ್ಯಾಂಡ್, ಸಕಲೇಶಪುರ ತಂಡದವರಿಂದ ನಾಸಿಕ್ ಬ್ಯಾಂಡ್, ಮಡಿಕೇರಿ ಶಾಂತಿನಿಕೇತನ ಯುವಕ ಸಂಘದವರಿಂದ ಲೋಕಕಲ್ಯಾಣಕ್ಕಾಗಿ ಗಣಪತಿಯು ಮಯೂರೇಷನಾಗಿ ಸಿಂಧೂ ದೈತ್ಯರಾಜನ ವಧೆ ಎಂಬ ಕಥಾನಕದ ಟ್ಯೂಬ್ಲೋ ಮೂಲಕ ಶನಿವಾರ ಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಮುಖ್ಯ ರಸ್ತೆಗಳಲ್ಲಿ ಶೋಭಾಯಾತ್ರೆ ತೆರಳಲಿದೆ.
ಡಿಜೆ ಸೌಂಡ್ಸ್ ಮೆರವಣಿಗೆಗೆ ಸಾಥ್ ನೀಡಲಿದೆ. ಶೋಭಾಯಾತ್ರೆ ಶನಿವಾರಸಂತೆಯ ಮುಖ್ಯ ರಸ್ತೆಗಳಲ್ಲಿ ತೆರಳಿ ಗೌರಿ ಗಣೇಶ ಮೂರ್ತಿಯನ್ನು ಕಾಜೂರು ಹೊಳೆಯಲ್ಲಿ ರಾತ್ರಿ ವಿಸರ್ಜಿಸಲಾಗುತ್ತದೆ ಎಂದು ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಆಡಳಿತ ಮಂಡಳಿಯರು ತಿಳಿಸಿದ್ದಾರೆ.