ಸಾರಾಂಶ
ನಾವು ಪರ ಊರಿಗೆ ಪ್ರಯಾಣ ಬೆಳೆಸಿದಾಗ ನಾವು ತಲುಪಬೇಕಾದ ಸ್ಥಳಕ್ಕೆ ನಂಬಿಕೆಯಿಂದ ತಲುಪಿಸುವವರು ಆಟೋ ರಿಕ್ಷಾ ಚಾಲಕರು ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ನಾವು ಪರ ಊರಿಗೆ ಪ್ರಯಾಣ ಬೆಳೆಸಿದಾಗ ನಾವು ತಲುಪಬೇಕಾದ ಸ್ಥಳಕ್ಕೆ ನಂಬಿಕೆಯಿಂದ ತಲುಪಿಸುವವರು ಆಟೋರಿಕ್ಷಾ ಚಾಲಕರು. ಇವರನ್ನು ನಾವು ನಂಬಿಕೆ ಇಡಬೇಕು ಎಂದು ಗೌಡಳ್ಳಿ ಬಿಜಿಎಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ರತ್ನಮ್ಮ ಅಭಿಪ್ರಾಯಪಟ್ಟರು.ಅವರು ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶ್ರೀ ವಿಘ್ನೇಶ್ವರ ಆಟೋ ಚಾಲಕರ ಸಂಘದ ಸದಸ್ಯರೊಂದಿಗೆ ಪುಟಾಣಿ ಮಕ್ಕಳು ರಕ್ಷಾ ಬಂಧನ ಹಬ್ಬದ ರಕ್ಷೆಯನ್ನು ಕಟ್ಟಿ ಸಂತೋಷದಿಂದ ಆಚರಿಸಿದರು
ಪುಟಾಣಿ ಮಕ್ಕಳ ಈ ಸಂತೋಷದ ಕ್ಷಣವನ್ನು ಆಟೋ ಚಾಲಕರು ಮತ್ತು ಸ್ಥಳೀಯರು ಸಂಭ್ರಮಿಸಿದರು. ನಂತರ ಶನಿವಾರಸಂತೆ ಆರಕ್ಷಕ ಠಾಣೆಗೆ ತೆರಳಿ ಆರಕ್ಷಕ ಠಾಣೆಯ ಸಿಬ್ಬಂದಿ ರಕ್ಷಾ ಬಂಧನದ ಶುಭಾಶಯಗಳು ತಿಳಿಸಿ ಸಿಹಿ ವಿತರಿಸಿದರು. ಈ ವೇಳೆ ಸಹ ಶಿಕ್ಷಕಿ ಸುನಿತಾ, ರೋಸಿ, ದೈಹಿಕ ಶಿಕ್ಷಕ ಗಣೇಶ್, ಹಾಗೂ ಶನಿವಾರಸಂತೆ ಆಟೋ ಚಾಲಕರು, ಆರಕ್ಷಕ ಠಾಣೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.