ಸಾರಾಂಶ
ದಾವಣಗೆರೆ: ಶ್ರೀಮದ್ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ಭಾನುವಾರ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಶ್ರೀ ಶಂಕರಾಚಾರ್ಯ ದೇವಸ್ಥಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಜಯಂತಿ ಅಂಗವಾಗಿ ಶ್ರೀ ಶಂಕರಾಚಾರ್ಯರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ನಗರದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಉತ್ಸವದಲ್ಲಿ ಮಹಿಳೆಯರಿಂದ ಭಜನೆ, ಪುರುಷರಿಂದ ನೃತ್ಯ ಭಜನೆ ಹಾಗೂ ವಿಶೇಷವಾಗಿ ಮಧು ಮತ್ತು ತಂಡದವರಿಂದ ಚಂಡೆವಾದ್ಯ ಮೆರಗು ತಂದಿತು.ಶ್ರೀ ಶಂಕರ ಸೇವಾ ಸಂಘದ ಉಪಾಧ್ಯಕ್ಷ ಮೋತಿ ಸುಬ್ರಹ್ಮಣ್ಯ, ಕಾರ್ಯದರ್ಶಿ ಶ್ರೀನಿವಾಸ್ ಜೋಶಿ, ಮಾಜಿ ಅಧ್ಯಕ್ಷ ಡಾ. ಎಸ್.ಆರ್.ಹೆಗಡೆ, ಪುರೋಹಿತರಾದ ಪುಟ್ಟಸ್ವಾಮಿ, ಸಂಘದ ಸದಸ್ಯರಾದ ವಿನಾಯಕ ಜೋಶಿ, ಸುಬ್ಬಣ್ಣ, ಅನಿಲ್ ಬಾರಂಗಳ್, ಬಾಲಕೃಷ್ಣ ವೈದ್ಯ, ಚೈತನ್ಯ ನಾರಾಯಣಸ್ವಾಮಿ, ರಾಘವೇಂದ್ರ, ಶ್ರೀಕಾಂತ್ ಜೋಶಿ, ರಮೇಶ್ ಪಾಟೀಲ್ ಕೆ.ಎಂ.ಶ್ರೀಕಾಂತ್, ಗುರುರಾಜ, ರಮೇಶ, ಗಣೇಶ, ಅನಿರುದ್, ರೂಪಶ್ರೀ ಶಶಿಕಾಂತ್, ಸುಮ ವೆಂಕಟೇಶ, ಗೀತಾ, ಲಕ್ಷ್ಮಿ ರಮೇಶ ಸೇರಿದಂತೆ ಇತರರು ಭಾಗವಹಿಸಿದ್ದರು.
- - -(* ಈ ಪೋಟೋ ಪ್ಯಾನೆಲ್‌ಗೆ ಬಳಸಬಹುದು)
-12ಕೆಡಿವಿಜಿ31, 32ಃ:ದಾವಣಗೆರೆಯಲ್ಲಿ ಶ್ರೀ ಶಂಕರ ಸೇವಾ ಸಂಘದಿಂದ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು. ಮಹಿಳೆಯರಿಂದ ಭಜನೆ, ಪುರುಷರಿಂದ ನೃತ್ಯ ಭಜನೆ ಹಾಗೂ ವಿಶೇಷವಾಗಿ ಮಧು ಮತ್ತು ತಂಡದವರ ಚಂಡೆವಾದ್ಯ ಗಮನ ಸೆಳೆಯಿತು.
;Resize=(128,128))
;Resize=(128,128))
;Resize=(128,128))