ಶಂಕರಾಚಾರ್ಯರ ಜಯಂತ್ಯುತ್ಸವ, ಶೋಭಾಯಾತ್ರೆ

| Published : May 13 2024, 12:04 AM IST

ಶಂಕರಾಚಾರ್ಯರ ಜಯಂತ್ಯುತ್ಸವ, ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಬ್ರಾಹ್ಮಣರ ಓಣಿಯಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತ್ಯುತ್ಸವ ಹಾಗೂ ಶೋಭಾಯಾತ್ರೆ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು

ಸಿಂಧನೂರು: ನಗರದ ಬ್ರಾಹ್ಮಣರ ಓಣಿಯಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತ್ಯುತ್ಸವ ಹಾಗೂ ಶೋಭಾಯಾತ್ರೆ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು.

ದೇವಸ್ಥಾನದ ಅರ್ಚಕ ಸುಬ್ಬುಶಾಸ್ತ್ರಿ ಹಾಗೂ ರಾಮಚಂದ್ರ ಸೋಮಯಾಜಿ ನೇತೃತ್ವದಲ್ಲಿ ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ, ಅಲಂಕಾರ ನಡೆಯಿತು. ನಂತರ ಹಲವಾರು ಭಜನಾ ಮಂಡಳಿಗಳಿಂದ ಭಜನೆ ಮಾಡುತ್ತಾ, ಹಳೇಬಜಾರ್‌ನಿಂದ ಶ್ರೀರಾಮ ಮಂದಿರದವರಗೆ ಶಂಕರಾಚಾರ್ಯರ ಭಾವಚಿತ್ರದ ಜೊತೆಗೆ ಶೋಭಾಯಾತ್ರೆ ಜರುಗಿತು.

ನಂತರ ಅರ್ಚಕ ರಾಮಚಂದ್ರ ಸೋಮಾಯಾಜಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ಸಂಚಾರ ಮಾಡುವದು ಕಷ್ಟದ ಸಮಯದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ದೇಶಾದ್ಯಂತ ಸಂಚರಿಸಿ ಜನಮನ ಗೆದ್ದರು. ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿ ಮಾಡಿ ಹಿಂದೂ ಧರ್ಮವನ್ನು ಪುನುರುತ್ಥಾನಗೊಳಿಸಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಮಕೃಷ್ಣಾಚಾರ್ ಗೋನ್ವಾರ, ನರಸಿಂಹಾಚಾರ್ ಮಠಾಧಿಕಾರ್, ಗೋವಿಂದರಾವ್ ಕುಲಕರ್ಣಿ, ಮನೋಹರರಾವ್ ಕುಲಕರ್ಣಿ, ರಾಜು ಬಂಡಿ ವಕೀಲ್, ಎಂ.ವಿ.ಮೋಹನ್, ಲಕ್ಷ್ಮಣರಾವ್ ಕುಲಕರ್ಣಿ, ಶೇಷಾದ್ರಿ, ವಿಶ್ವನಾಥ ಕಲ್ಲೂರು, ವೆಂಕಟೇಶ ಕೆಂಗಲ್, ಪ್ರಹ್ಲಾದ ಕುಲಕರ್ಣಿ, ಪ್ರಭು ದೇಶಪಾಂಡೆ, ಆನಂದ ಗೋರ್ಕರ್, ಪ್ರಭಾಕರ ಕುಲಕರ್ಣಿ, ಅವಿನಾಶ್ ಬಂಡಿ ವಕೀಲ್, ವಿನಾಯಕ ಕಲ್ಲೂರು, ಸುನೀಲ್ ಕುಲಕರ್ಣಿ, ಜಗನ್ನಾಥ ದೇಶಪಾಂಡೆ, ಪ್ರಾಣೇಶ ಸಿದ್ರಾಂಪುರ ಇದ್ದರು.