ಹುಬ್ಬಳ್ಳಿ:
ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಶಂಕರಲಿಂಗ ಟವಳಿ ಅವರು ಡಾ. ಬಿ.ಎಂ. ರತ್ನಾಕರ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ "ವಿಶೇಷ ಚೇತನರ ಸಬಲೀಕರಣದಲ್ಲಿ ಕರ್ನಾಟಕ ಸರ್ಕಾರದ ಕಲ್ಯಾಣ ಕಾರ್ಯಯೋಜನೆಗಳ ವಿಶ್ಲೇಷಣಾತ್ಮಕ ಅಧ್ಯಯನ " ಎಂಬ ಮಹಾಪ್ರಬಂಧಕ್ಕೆ ಕವಿವಿ "ಡಾಕ್ಟರ್ ಆಫ್ ಫಿಲಾಸಫಿ " ಪದವಿ ಪ್ರದಾನ ಮಾಡಿತು. ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಅವರಿಂದ ಪದವಿ ಸ್ವೀಕರಿಸಿದರು.ಶಂಕರಲಿಂಗ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದವರು. ರೈತನ ಮಗನಾಗಿ ಶಿಕ್ಷಣ ಪಡೆಯಲು ಸಾಕಷ್ಟು ಕಷ್ಟ ಎದುರಿಸಿದರೂ ಅಂಜದೇ ಪದವಿ ಪೂರ್ಣಗೊಳಿಸಿ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯೊಂದಿಗೆ ದೂರಶಿಕ್ಷಣದ ಮೂಲಕ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಈಗ ಪಿಎಚ್.ಡಿ ಪದವಿ ಗಳಿಸಿದ್ದಾರೆ.
ಪ್ರವೃತ್ತಿಯಿಂದ ಇವರು ಪ್ಯಾರಾಶೂಟರ್ ಕೂಡ ಆಗಿದ್ದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕ ಪಡೆದು ನಾಡಿನ ಕೀರ್ತಿ ಪಸರಿಸಿದ್ದಾರೆ. ಪ್ಯಾರಾ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಬೇಕೆಂದು ಸತತವಾಗಿ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಇವರು ಕನಸ ನನಸಾಗಲು ಕುಟುಂಬ ವರ್ಗವು ಬೆನ್ನೆಲುಬಾಗಿ ನಿಂತಿದೆ.