ಸಾರಾಂಶ
ತುರುವೇಕೆರೆತಾಲೂಕಿನ ಹಡವನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶಂಕರಪ್ಪ, ಉಪಾಧ್ಯಕ್ಷರಾಗಿ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಹಡವನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶಂಕರಪ್ಪ, ಉಪಾಧ್ಯಕ್ಷರಾಗಿ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗುರುವಾರ ನಡೆದ ಚುನಾವಣೆಯಲ್ಲಿ ಹೊನ್ನೇನಹಳ್ಳಿ ಕ್ಷೇತ್ರದ ಸದಸ್ಯ ಶಂಕರಪ್ಪ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹೆಗ್ಗೆರೆಯ ಸದಸ್ಯೆ ಸರೋಜಮ್ಮ ನಾಮಪತ್ರ ಸಲ್ಲಿಸಿದ್ದರು. ಎರಡೂ ಹುದ್ದೆಗಳಿಗೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಇಬ್ಬರೂ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಕುಂ.ಇ.ಅಹಮದ್ ಪ್ರಕಟಿಸಿದರು.
ಈ ಸಂಧರ್ಭದಲ್ಲಿ ೧೩ ಸದಸ್ಯರ ಪೈಕಿ ೯ ಮಂದಿ ಸದಸ್ಯರು ಹಾಜರಿದ್ದರು. ಸದಸ್ಯರಾದ ಯೋಗೀಶ್, ಸುಧಾ ರಂಗಸ್ವಾಮಿ, ನೇತ್ರಾವತಿ, ರತ್ನಮ್ಮ, ಜಯ್ಯಣ್ಣ, ರಾಮಚಂದ್ರಯ್ಯ, ಲಕ್ಷ್ಮೀಕಾಂತ್ ಚುನಾವಣೆಯಲ್ಲಿ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಸದಸ್ಯರು ಮತ್ತು ತಮ್ಮ ಪಂಚಾಯಿತಿಯ ಮತದಾರರಿಗೆ ನೂತನ ಅಧ್ಯಕ್ಷ ಶಂಕರಪ್ಪ, ಉಪಾಧ್ಯಕ್ಷೆ ಸರೋಜಮ್ಮ ಕೃತಜ್ಞತೆ ಸಲ್ಲಿಸಿದರು.
ಮುಖಂಡರಾದ ರಂಗಸ್ವಾಮಿ, ಸಂಪತ್ ಕುಮಾರ್, ಗೋವಿಂದಯ್ಯ, ಲವೇಂದ್ರ ಕುಮಾರ್ ಸೇರಿ ಹಲವರು ಅಭಿನಂದಿಸಿದರು.