ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ನ ದ್ವಿತೀಯ ವರ್ಷದಲ್ಲಿ ಅರಿವಳಿಕೆ ಔಷಧ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಚೇತನ್ ಜೋಗಿ (ರತ್ನಾ ಜೋಗಿ ಮತ್ತು ಉದಯ ಜೋಗಿ ಅವರ ಪುತ್ರ) ಎಂಬರಿಗೆ ಕಾಪು ತಾಲೂಕಿನ ಶಂಕರಪುರದಲ್ಲಿ ದಾನಿ ಆದಿ ಉಡುಪಿಯ ಗುರುರಾಜ ಅಮೀನ್ ಪ್ರಾಯೋಜಕತ್ವದಲ್ಲಿ ಪುನರ್ ನಿರ್ನಿಸಿದ ‘ಜಯಲಕ್ಷ್ಮೀ ನಿಲಯ’ ಮನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಹಸ್ತಾಂತರಿಸಿದರು.
ಕಾಪು: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ನ ದ್ವಿತೀಯ ವರ್ಷದಲ್ಲಿ ಅರಿವಳಿಕೆ ಔಷಧ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಚೇತನ್ ಜೋಗಿ (ರತ್ನಾ ಜೋಗಿ ಮತ್ತು ಉದಯ ಜೋಗಿ ಅವರ ಪುತ್ರ) ಎಂಬರಿಗೆ ಕಾಪು ತಾಲೂಕಿನ ಶಂಕರಪುರದಲ್ಲಿ ದಾನಿ ಆದಿ ಉಡುಪಿಯ ಗುರುರಾಜ ಅಮೀನ್ ಪ್ರಾಯೋಜಕತ್ವದಲ್ಲಿ ಪುನರ್ ನಿರ್ನಿಸಿದ ‘ಜಯಲಕ್ಷ್ಮೀ ನಿಲಯ’ ಮನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ನನಗೆ ಯಕ್ಷಗಾನ ಕಲಾರಂಗದ ಕಾರ್ಯಕ್ರಮಕ್ಕೆ ಬರುವದೆಂದರೆ ಎಲ್ಲಿಲ್ಲದ ಉತ್ಸಾಹ. ಅವರಿಗಿರುವ ಸಾಮಾಜಿಕ ಬದ್ಧತೆ, ಕಳಕಳಿ ಅನನ್ಯ. ಇದು ಸಾಮಾಜಿಕವಾಗಿ ಕೆಲಸ ಮಾಡುವ ಎಲ್ಲ ಸಂಘಟನೆಗಳಿಗೆ ಮಾದರಿ ಎಂದರು.ಆದರ್ಶ ಆಸ್ಪತ್ರೆಯ ಆಡಳಿತಾಧಿಕಾರಿ ವಿಮಲಾ ಚಂದ್ರಶೇಖರ್ ಮಾತನಾಡಿ, ಯಕ್ಷಗಾನ ಕಲಾರಂಗದ ಕಾರ್ಯಚಟುವಟಿಕೆಗಳ ಬಗ್ಗೆ ಕೇಳಿದ್ದೆ. ಇವತ್ತು ಅದರ ಪ್ರತ್ಯಕ್ಷ ದರ್ಶನವಾಯಿತು. ಅರ್ಹರಿಗೆ ಮನೆ ನಿರ್ಮಿಸಿ ಯಾವ ಆಡಂಬರವಿಲ್ಲದೆ ಸರಳ ಸಮಾರಂಭದ ಮೂಲಕ ಹಸ್ತಾಂತರಿಸುವ ಕ್ರಮ ಬೇರೆಡೆ ಕಾಣಸಿಗದು ಎಂದರು.ಜಯಲಕ್ಷ್ಮೀ ಗುರುರಾಜ ಅಮೀನ್, ನಿವೃತ್ತ ಪ್ರಾಧ್ಯಾಪಕಿ ಶಾರದಾ ಮೇಡಂ ಹಾಜರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ ಸದಾಶಿವ ರಾವ್, ಸದಸ್ಯರಾದ ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ,ಹಿರಿಯಣ್ಣ ಕಿದಿಯೂರ್, ಕಿಶೋರ್ ಸಿ. ಉದ್ಯಾವರ, ಗಣಪತಿ ಭಟ್, ಎಚ್. ಎನ್. ವೆಂಕಟೇಶ್, ಅಶೊಕ ಎಂ., ನಾಗರಾಜ ಹೆಗಡೆ, ಸುದರ್ಶನ ಬಾಯರಿ, ವಿಶ್ವನಾಥ,ಚಂದ್ರಕಾಂತ ಕೆ. ಎನ್. ಇದ್ದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.