ಸಾರಾಂಶ
ಒಟ್ಟು 20 ಸದಸ್ಯರ ಬಲವನ್ನು ಹೊಂದಿರುವ ಕ್ಯಾತನಹಳ್ಳಿ ಗ್ರಾಪಂನಲ್ಲಿ ಆಯ್ಕೆಯಾಗಿರುವ ಎಲ್ಲಾ ಸದಸ್ಯರು ರೈತಸಂಘದ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ರೈತ ಸಂಘದಲ್ಲಿನ ಅಧಿಕಾರ ಒಡಂಬಡಿಕೆ ಸೂತ್ರಧನ್ವಯ ಈ ಹಿಂದಿನ ಅಧ್ಯಕ್ಷೆ ಆಯೀಷಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕ್ಯಾತನಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ರೈತ ಸಂಘದ ಬೆಂಬಲಿತ ಅಭ್ಯರ್ಥಿ ಶಾಂತಮ್ಮ ಸಿದ್ದಚಾರ್ ಅವಿರೋಧವಾಗಿ ಆಯ್ಕೆಯಾದರು.ಒಟ್ಟು 20 ಸದಸ್ಯರ ಬಲವನ್ನು ಹೊಂದಿರುವ ಗ್ರಾಪಂನಲ್ಲಿ ಆಯ್ಕೆಯಾಗಿರುವ ಎಲ್ಲಾ ಸದಸ್ಯರು ರೈತಸಂಘದ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ರೈತ ಸಂಘದಲ್ಲಿನ ಅಧಿಕಾರ ಒಡಂಬಡಿಕೆ ಸೂತ್ರಧನ್ವಯ ಈ ಹಿಂದಿನ ಅಧ್ಯಕ್ಷೆ ಆಯೀಷಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ರೈತಸಂಘದ ಬೆಂಬಲಿತ ಅಭ್ಯರ್ಥಿ ಶಾಂತಮ್ಮ ಸಿದ್ದಾಚಾರ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ನೂತನ ಅಧ್ಯಕ್ಷರಾಗಿ ಶಾಂತಮ್ಮ ಸಿದ್ದಾಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.ಈ ವೇಳೆ ರೈತಸಂಘದ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷ ಕೆ.ಎಸ್.ರವಿಕುಮಾರ್, ಮಾಜಿ ಉಪಾಧ್ಯಕ್ಷ ನಯನ (ಸಂತೋಷ್), ಸದಸ್ಯರಾದ ಮನೋಹರ್, ವಿನಾಯಕ, ಚಿದಾನಂದ, ಯಮುನಾ, ಅನಿತಾ, ರೈತಸಂಘದ ಕ್ಯಾತನಹಳ್ಳಿ ಘಟಕದ ಅಧ್ಯಕ್ಷ ರವಿಕುಮಾರ್, ರೈತಸಂಘದ ಮುಖಂಡರಾದ ಕೆ.ಕೆ.ಗೌಡೇಗೌಡ, ಕ್ಯಾತನಹಳ್ಳಿ ನಟರಾಜ, ಕೋಡಹಳ್ಳಿ ಹೊಸೂರು ದಿನೇಶ್, ಯೋಗೇಶ್, ಮಲ್ಲಿಗೆರೆ ರಾಜು, ಗಾಣದ ಹೊಸೂರಿನ ಪುನಿ, ಕ್ಯಾತನಹಳ್ಳಿ ಜಿ.ತುಳಸೀದಾಸ್ ಸೇರಿದಂತೆ ಇತರರಿದ್ದರು.