ಕನ್ನಡಪ್ರಭ ವಾರ್ತೆ ವಿಜಯಪುರ

ಕೆಸಿಇಟಿಯಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸಿದ ಶಾಂತಿನಿಕೇತನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಪೂಜಾ ಇಟಿ ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 96ನೇ ರ್‍ಯಾಂಕ್‌ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಅಗ್ರಿಯಲ್ಲಿ ರಾಜ್ಯಕ್ಕೆ 12ನೇ ರ್‍ಯಾಂಕ್‌ ಗಳಿಸಿದ್ದಾಳೆ. ಇನ್ನುಳಿದ ವಿದ್ಯಾರ್ಥಿಗಳಾದ ಶ್ರೇಯಾ ತಮಗೊಂಡ, ರೋಹಿತ ಬಿರಾದಾರ, ವಿನಯ ಬಿರಾದಾರ, ಸ್ಫೂರ್ತಿ ಅಕ್ಕಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಚೇರ್ಮನ್‌ ಡಾ.ಸುರೇಶ ಬಿರಾದಾರ, ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕರಾದ ಶರತ ಬಿರಾದಾರ, ಭರತ ಬಿರಾದಾರ, ಶೈಕ್ಷಣಿಕ ವರ್ಷದ ಮುಖ್ಯಸ್ಥ ನಾಗರಾಜ ರೊಟ್ಟಿ, ಪ್ರಾಚಾರ್ಯ ರವಿರಾಜ ಸಿದ್ದಲಿಂಗ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.