ಕರ್ನಾಟಕ, ತಮಿಳುನಾಡು , ತೆಲಂಗಾಣ , ದೆಹಲಿ, ಗುಜರಾತ್, ಒರಿಸ್ಸಾ, ಕೇರಳ ರಾಜ್ಯಗಳಿಂದ ಸುಮಾರು 450ಕ್ಕೂ ಹೆಚ್ಚಿನ ಕ್ರಿಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪಾರಿಂಗ್ ವಿಭಾಗದಲ್ಲಿ ಆರಂಭದಿಂದಲೂ ಮುನ್ನಡೆ ಸಾಧಿಸಿದ ಶಾನ್ವಿ ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಪೈಪೋಟಿ ನೀಡಿದ್ದಳು. ಅಂತಿಮವಾಗಿ ಶಾನ್ವಿ ಸತೀಶ್ ಕಂಚಿನ ಪದಕ ಪಡೆದುಕೊಂಡಳು.
ರಾಮನಗರ: ಗುಜರಾತ್ ನ ಗಾಂಧಿನಗರದ ಧ್ಯಾನ್ ಅಕಾಡೆಮಿಯಲ್ಲಿ ನಡೆದ 40ನೇ ರಾಷ್ಟ್ರಮಟ್ಟದ ಸಬ್ ಜ್ಯೂನಿಯರ್ - ಜ್ಯೂನಿಯರ್ ಟೆಕ್ವಾಂಡೋ ಸ್ಪರ್ಧೆಯಲ್ಲಿ 8 ರಿಂದ 10 ವಯೋಮಾನದ 25 ರಿಂದ 30 ಕೆಜಿ ತೂಕದ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ರಾಮನಗರ ಶಾನ್ವಿ ಸತೀಶ್ ಸ್ಪಾರಿಂಗ್ ನಲ್ಲಿ ಒಂದು ಕಂಚಿನ ಪದಕ ಪಡೆದಿದ್ದಾಳೆ.
ಕರ್ನಾಟಕ, ತಮಿಳುನಾಡು , ತೆಲಂಗಾಣ , ದೆಹಲಿ, ಗುಜರಾತ್, ಒರಿಸ್ಸಾ, ಕೇರಳ ರಾಜ್ಯಗಳಿಂದ ಸುಮಾರು 450ಕ್ಕೂ ಹೆಚ್ಚಿನ ಕ್ರಿಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪಾರಿಂಗ್ ವಿಭಾಗದಲ್ಲಿ ಆರಂಭದಿಂದಲೂ ಮುನ್ನಡೆ ಸಾಧಿಸಿದ ಶಾನ್ವಿ ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಪೈಪೋಟಿ ನೀಡಿದ್ದಳು. ಅಂತಿಮವಾಗಿ ಶಾನ್ವಿ ಸತೀಶ್ ಕಂಚಿನ ಪದಕ ಪಡೆದುಕೊಂಡಳು.ಶಾನ್ವಿ ಸತೀಶ ಈ ಹಿಂದೆ ದುಬೈ ಮತ್ತು ಉಜ್ಬೇಕಿಸ್ತಾನ್ ಮತ್ತು ಏಶಿಯನ್ ಚಾಂಪಿಯನ್ ಶಿಪ್ ಮತ್ತು ಮಲೇಷ್ಯಾ ನಲ್ಲೂ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದಿದ್ದರು .
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಹಾಗೂ ಚೈತ್ರಾ ದಂಪತಿ ಪುತ್ರಿಯಾದ ಶಾನ್ವಿ, ರಾಮನಗರದ ನೇಟಸ್ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಭಾರತ ತಂಡದ ತರಬೇತುದಾರರಾದ ಪ್ರದೀಪ್ ಮತ್ತು ಬಾಲರಾಜನ್ ರವರು ಶಾನ್ವಿಗೆ ತರಬೇತಿ ನೀಡುತ್ತಿದ್ದಾರೆ.