ಗುರುವಿನ ಸನ್ಮಾರ್ಗದಲ್ಲಿ ಭವಿಷ್ಯ ರೂಪಿಸಿಕೊಳ್ಳಿ

| Published : Sep 06 2025, 02:00 AM IST

ಗುರುವಿನ ಸನ್ಮಾರ್ಗದಲ್ಲಿ ಭವಿಷ್ಯ ರೂಪಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಶಿಕ್ಷಕರಿಗೆ ಇರುವಂತ ಗೌರವ ಮತ್ತಾರಿಗೂ ಇಲ್ಲದಾಗಿದ್ದು, ವಿಶೇಷ ಸ್ಥಾನಮಾನ ಹೊಂದಿರುವ ಗುರುವಿನ ಬಗ್ಗೆ ನಾವೆಲ್ಲರೂ ಪೂಜ್ಯ ಭಾವನೆಯೊಂದಿಗೆ ನಡೆದುಕೊಳ್ಳುವುದರ ಜೊತೆಗೆ ಗುರುವಿನ ಸನ್ಮಾರ್ಗದಲ್ಲಿ ನಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಸಮಾಜದಲ್ಲಿ ಶಿಕ್ಷಕರಿಗೆ ಇರುವಂತ ಗೌರವ ಮತ್ತಾರಿಗೂ ಇಲ್ಲದಾಗಿದ್ದು, ವಿಶೇಷ ಸ್ಥಾನಮಾನ ಹೊಂದಿರುವ ಗುರುವಿನ ಬಗ್ಗೆ ನಾವೆಲ್ಲರೂ ಪೂಜ್ಯ ಭಾವನೆಯೊಂದಿಗೆ ನಡೆದುಕೊಳ್ಳುವುದರ ಜೊತೆಗೆ ಗುರುವಿನ ಸನ್ಮಾರ್ಗದಲ್ಲಿ ನಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನರವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಕಾರಂಜಿಯ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಶೈಕ್ಷಣಿಕ ಅಭಿವೃದ್ಧಿಗೊಸ್ಕರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ನವೀಕರಣಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಶಿಕ್ಷಕ ವೃತ್ತಿ ಬಹಳ ಅಮೂಲ್ಯವಾದದ್ದು, ಶಿಕ್ಷಕರು ಮಕ್ಕಳ ಮಟ್ಟಕ್ಕಿಳಿದು ಬೋಧಿಸುವುದರ ಜೊತೆಗೆ ಪರಿಣಾಮಕಾರಿ ಬೋಧನೆಯತ್ತ ಗಮನ ಹರಿಸಬೇಕು ಎಂದರು.ಡಿಎಸ್ಪಿ ಚಿದಂಬರ ಮಡಿವಾಳರ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ನಾವು ಕರ್ತವ್ಯ ನಿರ್ವಹಿಸುವಾಗ ಜನರು ನಮಗೆ ಹೆದರಿಕೆಯಿಂದ ಗೌರವ ನೀಡುತ್ತಾರೆ. ಆದರೆ, ಅದೇ ಶಿಕ್ಷಕರಿಗೆ ಮಾತ್ರ ಒಟ್ಟಾರೆ ಸಮಾಜವೇ ನೀಡುವಂತ ಗೌರವದ ಸ್ವರೂಪವೇ ಬೇರೆಯಾಗಿದೆ. ಅದಕ್ಕೆ ಶಿಕ್ಷಕರ ಸ್ಥಾನದಲ್ಲಿದ್ದುಕೊಂಡವರು ಆ ಹುದ್ದೆಗೆ ಗೌರವ ತರುವಂತ ಕಾರ್ಯ ಮಾಡಬೇಕು ಎಂದು ತಿಳಿಸಿದರು.ಪತ್ರಕರ್ತ ರಾಘವೇಂದ್ರ ಸರದೇಸಾಯಿ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಮಟ್ಟದ ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಪೂಜೇರ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದ್ದ ಬಸನ್ನವರ, ನೌಕರರ ಸಂಘದ ಅಧ್ಯಕ್ಷ ಅಶೋಕ ಮುರಗೋಡ, ನಿವೃತ್ತ ಪ್ರಧಾನ ಗುರುಮಾತೆ ಭಾಗೀರಥಿ ಹಿರೇಮಠ, ವೀರನಗೌಡ ಸಂಗಣ್ಣವರ, ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ, ತಾಪಂ ಇಒ ಆನಂದ ಬಡಕುಂದ್ರಿ, ಪುರಸಭೆ ಸದಸ್ಯರಾದ ಅರ್ಜುನ ಅಮ್ಮೋಜಿ, ಅಶ್ವತ ವೈದ್ಯ, ಸಿಪಿಐ ಧರ್ಮಾಕರ ಧರ್ಮಟ್ಟಿ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ರತ್ನಾ ಕದಂ, ಶಿವು ರಾಠೋಡ ಇತರರು ಉಪಸ್ಥಿತರಿದ್ದರು.