ಇಲ್ಲಿನ ಅಂಬಾಗಿಲು ವೈಶ್ಯವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಹಾಗೂ 34 ನೇ ವರ್ಷದ ಶ್ರೀ ಶಾರದಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಗುರುವಾರ ಸಂಜೆ ಶ್ರೀ ಶಾರದಾ ದೇವಿಯ ವಿಸರ್ಜನಾ ಶೋಭಾ ಯಾತ್ರೆಯೂ ವೈಭವದಿಂದ ನಡೆಸಿ ಕಲ್ಯಾಣಪುರದ ಸ್ವರ್ಣ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನವರಾತ್ರಿಯ ಪ್ರತಿದಿನ ದೇವಿಯ ಸನ್ನಿಧಿಯಲ್ಲಿ ಭಜನೆ, ದೇವರಿಗೆ ವಿಶೇಷ ಅಲಂಕಾರ, ಚಂಡಿಕಾ ಯಾಗ, ದೀಪ ನಮಸ್ಕಾರ, ದುರ್ಗಾ ನಮಸ್ಕಾರ, ಸಮಾರಾಧನೆ ಇತ್ಯಾದಿಗಳು ಸಾಂಗವಾಗಿ ಜರುಗಿತು.

ಶ್ರೀನಿವಾಸ ತಂತ್ರಿಗಳು ಈ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಮಹಾಪೂಜೆ ನೆರವೇರಿಸಿದರು. ದೇವಳದ ಆಡಳಿತ ಮುಕ್ತೇಸರ ಪಿ. ವಸಂತ ನಾಯಕ, ಪ್ರಮುಖರಾದ ರಾಜೇಶ್ ಶೇಟ್, ಕಿಶೋರ್ ಪಾಲ್, ರಾಘವೇಂದ್ರ ಗಾಂವ್ಸ್ಕರ್, ಗಣೇಶ್ ಗಾಂವ್ಸ್ಕರ್, ಶಂಕರ್ ನಾಯಕ್, ಶಶಿಕಾಂತ್ ನಾಯಕ್, ವಿನೋದ್ ರಾಜ್, ದಿನಕರ್ ಗಾಂವ್ಸ್ಕರ್, ಗುರುಸೇವಾ ಸಮಿತಿಯ ಸದಸ್ಯರು, ಯುವಕ ಮಂಡಳಿ, ಮಹಿಳಾ ಮಂಡಳಿಯ, ಭಜನಾ ಮಂಡಳಿಯ ಸದಸ್ಯರು, ನೂರಾರು ಸಮಾಜಭಾಂದವರು ಉಪಸ್ಥಿತರಿದ್ದರು.