ಇಂದಿನಿಂದ ಶಾರದಾಳ ಪ್ರೋ ಕಬಡ್ಡಿ ವೈಭವ ಸೀಸನ್-೩

| Published : May 14 2024, 01:00 AM IST

ಸಾರಾಂಶ

ಶಾರದಾಳ ಗ್ರಾಮ ದಲ್ಲಿ ಗ್ರಾಮದೇವತೆ ಶ್ರೀ ಆದಿಶಕ್ತಿ ದ್ಯಾಮವ್ವ ದೇವಿಯ ಉಡಿತುಂಬುವ ಹಾಗೂ ಮಾರುತೇಶ್ವರ ಓಕುಳಿ ನಿಮಿತ್ತ ಶಾರದಾಳ ಪ್ರೊ.ಕಬಡ್ಡಿ ವೈಭವ ಸೀಸನ್-೩ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಲಾದಗಿಬಾಗಲಕೋಟೆ ತಾಲೂಕಿನ ಶಾರದಾಳ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಆದಿಶಕ್ತಿ ದ್ಯಾಮವ್ವ ದೇವಿಯ ಉಡಿತುಂಬುವ ಹಾಗೂ ಮಾರುತೇಶ್ವರ ಓಕುಳಿ ನಿಮಿತ್ತ ಶ್ರೀ ಮಾರುತೇಶ್ವರ ಸ್ಪೋರ್ಟ್ಸ ಕ್ಲಬ್ ಶಾರದಾಳ, ಬಾಗಲಕೋಟೆ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಶಾರದಾಳ ಪ್ರೊ.ಕಬಡ್ಡಿ ವೈಭವ ಸೀಸನ್-೩, ಖಜ್ಜಿಡೋಣಿ ಗ್ರಾಪಂ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಹಾಗೂ ಅಂತಾರಾಜ್ಯ ಮಟ್ಟದ ಮಹಿಳಾ ಮುಕ್ತ ಕಬಡ್ಡಿ ಪಂದ್ಯಾವಳಿಗಳು ಮೇ ೧೪ ರಿಂದ ಮೇ ೧೬ರವರೆಗೆ ನಡೆಯಲಿವೆ ಎಂದು ಕಬಡ್ಡಿ ಪಂದ್ಯಾವಳಿ ಆಯೋಜಕ ಪ್ರಮುಖ ಪ್ರವೀಣ ಅರಕೇರಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರ ಕಬಡ್ಡಿ ಪಂದ್ಯಾವಳಿ ಮೇ ೧೪ರಂದು ಸಂಜೆ ೪.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬಬಲಾದಿಯ ಸಿದ್ರಾಮಯ್ಯ ಹೊಳಿಮಠ ಸಾನ್ನಿಧ್ಯ ವಹಿಸುವರು, ಖಜ್ಜಿಡೋಣಿ ಪಿಡಿಒ ಕೆ.ಎಚ್. ಮುಲ್ಲಾ ಅಧ್ಯಕ್ಷತೆ ವಹಿಸಲಿದ್ದು, ಡಾ ಬಸುರಾಜ ಸಂಶಿ ಉದ್ಘಾಟಿಸುವರು. ೧೫ರಂದು ಅಂತರ ರಾಜ್ಯ ಮಟ್ಟದ ಮಹಿಳಾ ಮುಕ್ತ ಕಬಡ್ಡಿ ಪಂದ್ಯಾವಳಿಗಳ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಸಿದ್ರಾಮಯ್ಯ ಹೊಳಿಮಠ ಸಾನ್ನಿಧ್ಯ, ಲೊಕಾಪುರ ಎಪಿಎಂಸಿ ಮಾಜಿ ಅಧ್ಯಕ್ಷ ಲೋಕಣ್ಣ ಕತ್ತಿ ಅಧ್ಯಕ್ಷತೆ ವಹಿಸುವರು. ಬಾಲಕೋಟೆ ತಾಪಂ ಮಾಜಿ ಉಪಾಧ್ಯಕ್ಷ ಸಂಗಣ್ಣ ಮುಧೋಳ ಉದ್ಘಾಟಿಸುವರು. ಜಿಲ್ಲಾ ದಸ್ತು ಬರಹಗಾರ, ನಗರಸಭೆ ಸದಸ್ಯ ಪ್ರಕಾಶ.ವಿ. ಹಂಡಿ, ಗ್ರಾಪಂ ಸದಸ್ಯ ಆನಂದ ಹೊನ್ನಪ್ಪಗೋಳ ಜ್ಯೋತಿ ಬೆಳಗಿಸಲಿದ್ದಾರೆ. ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಮಾದರ, ಗ್ರಾಪಂ ಉಪಾಧ್ಯಕ್ಷೆ ಮಂಜುಳಾ.ಮು.ಕೆಂಜೋಡಿ, ಸಮಾಜ ಕಲ್ಯಾಣ ಅಧಿಕಾರಿ ಸೈರಾಭಾನು ನದಾಫ್ ಸಸಿಗೆ ನೀರೆರೆಯಲಿದ್ದಾರೆ ಎಂದು ಹೇಳಿದರು.

ಖಜ್ಜಿಡೋಣಿ ಗ್ರಾಪಂ ಮಟ್ಟದ ಪುರುಷ ಕಬಡ್ಡಿ ಆಟಗಾರರು, ಗ್ರಾಪಂ ಮಟ್ಟದ ಸ್ಥಳೀಯ ಆರು ಜನರ ಮಾಲೀಕತ್ವದಲ್ಲಿ ಹರಾಜಿಗೊಳಪಟ್ಟ ೬ ಕಬಡ್ಡಿ ತಂಡಗಳು ಭಾಗವಹಿಸಲಿವೆ ಎಂದರು. ಲಕ್ಷ್ಮಣ ಶಿರಬೂರ, ಹನುಮಂತಗೌಡ ನಿಂಗನಗೌಡ ಬಸವನಾಯಕ್, ಆನಂದ ಅರಕೇರಿ, ಕಾಶಪ್ಪ ತಳವಾರ, ಬಸವನಗೌಡ ಪಾಟೀಲ, ಶ್ರೀಮಂತ ಕೊಪ್ಪದ ಇನ್ನಿತರರು ಇದ್ದರು.

ಭಾವಹಿಸುವ ಅಂತರರಾಜ್ಯ ತಂಡಗಳು:

ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಎಸ್.ಎಸ್. ಅಕಾಡೆಮಿ ಹರಿಯಾಣ, ರುದ್ರ ಸ್ಪೋರ್ಟ್ಸ್ ಮುಂಬೈ, ಆರ್.ಬಿ.ಎಸ್.ಸಿ ಮುಂಬೈ, ಮಾತೋಶ್ರೀ ರತ್ನಾಗಿರಿ, ಹಿಂದವಿ ಕವಲೌ ಮಹಾರಾಷ್ಟ್ರ, ಕೊಲ್ಲಾಪುರದ ಸಾಧನಾ ಮಾಲಸವಾಡಿ, ಬಾರಾಮತಿಯ ಅನಿಕೇತ ಪಾಟೀಲ, ಏಕಲವ್ಯ ಮೂಡಬಿದ್ರೆ, ಮೂಡಬಿದ್ರೆ ಆಳ್ವಾಸ್, ಜೈ ಮಹಾಕಾಳಿ ಚಿಂಚಲಿ, ವಿಜಯಾ ವಾರಿಯರ್ಸ್‌ ಅಥಣಿ, ಜಿ.ಎಚ್.ಎಸ್ ಗವರ್ನಮೆಂಟ್ ಹೈಸ್ಕೂಲ್ ರಾಯಭಾಗ, ಮಹಾವಿದ್ಯಾವಿದ್ಯಾಲಯ ಪರಭನಿ ಕಬಡ್ಡಿ ತಂಡಗಳು ಭಾಗವಹಿಸಲಿವೆ.