ಸಾರಾಂಶ
ಅಂತಾರಾಷ್ಟ್ರೀಯ ಮಹಿಳಾ ದಿನ । ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚನ್ನಗಿರಿ12ನೇ ಶತಮಾನವು ಸುವರ್ಣ ಯುಗವಾಗಿದ್ದು ಆಗಿನ ಶರಣರು ಮಹಿಳೆಯರಿಗೆ ಪ್ರಥಮ ಆದ್ಯತೆಯನ್ನು ಕೊಡುತ್ತ ಗೌರವಿಸುತ್ತಿದ್ದ ಕಾಲವಾಗಿತ್ತು. ಇಂತಹ ಸಮಾನತೆಯನ್ನು ತಂದ ಶರಣ ಪರಂಪರೆಗೆ ಸಮಾನತೆಯನ್ನು ನೀಡಿದ ಕೀರ್ತಿ ಸಲ್ಲುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಹಿಳೆಗೆ ಉತ್ತಮವಾದ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದಾಗ ಕುಟುಂಬದ ನಿರ್ವಹಣೆಯ ಜತೆಯಲ್ಲಿ ಸಮಾಜದ ಸುಧಾರಣೆಯಲ್ಲಿ ಸಹಕಾರಿಯಾಗುವ ಜತೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯು ಯಶಸ್ಸು ಪಡೆಯುತ್ತಾಳೆ ಎಂದು ಹೇಳುತ್ತ, ಮಹಿಳೆಯು ನಂಬಿಕೆ ಮತ್ತು ಪ್ರಮಾಣಿಕತೆಗೆ ನ್ಯಾಯ ಒದಗಿಸಿದರೆ ಪುರುಷನಾದವನು ಉದಾಸೀನತೆಯಿಂದ ತನ್ನ ಅಸ್ತಿತ್ವದಲ್ಲಿ ಹಿಂದೆ ಉಳಿದಿರುತ್ತಾನೆ ಎಂದು ಹೇಳಿದರು.
ಸಮಾರಂಭದ ಉದ್ಘಾಟನೆಯನ್ನು ಚನ್ನಗಿರಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀದೀಶ ಸಿದ್ದಲಿಂಗಯ್ಯ ಗಂಗಾಧರಮಠ್ ನೆರವೇರಿಸಿ ಮಾತನಾಡಿ, ಮಕ್ಕಳಲ್ಲಿ ಶಿಸ್ತುಬದ್ಧ ಜೀವನವನ್ನು ರೂಪಿಸುವ ಜವಾಬ್ದಾರಿ ಪೋಷಕರದ್ದಾಗಿದ್ದು ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವಂತಹ ದೌರ್ಜನ್ಯಗಳನ್ನು ನಿಯಂತ್ರಣ ಮಾಡಲು ನಾಗರಿಕರ ಜವಾಬ್ದಾರಿ ಮುಖ್ಯವಾಗಿದೆ ಎಂದು ತಿಳಿಸುತ್ತ, ಪ್ರತಿಯೊಬ್ಬರಲ್ಲಿಯೋ ಕಾನೂನಿನ ಅರಿವು ಮೂಡಿಸಬೇಕು ಎಂದರು.ಕಾಲೇಜಿನ ಪ್ರಾಧ್ಯಾಪಕಿ ಟಿ.ಬಿ.ಜ್ಯೋತಿ ಮಾತನಾಡಿ, ಹೆಣ್ಣೋಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾನ್ನುಡಿಯಂತೆ ಹೆಣ್ಣುಮಕ್ಕಳು ಎಂದು ತಾತ್ಸಾರ ಮಾಡದೆ ಗಂಡಿಗೆ ಸಮನಾಂತರವಾಗಿ ಶಿಕ್ಷಣವನ್ನು ನೀಡಿದಾಗ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸನ್ನು ಸಾಧಿಸುತ್ತ ಮುನ್ನಡೆಯುತ್ತಾಳೆ. ಇದಕ್ಕೆ ಪೋಷಕರ ಮತ್ತು ಕುಟುಂಬದವರ ಸಹಕಾರ ನೀಡಬೇಕು ಎಂದರು.
ಪ್ರಾಚಾರ್ಯ ಗಿರಿಸ್ವಾಮಿ, ತಹಸೀಲ್ದಾರ್ ಎನ್.ಜೆ.ನಾಗರಾಜ್, ಸಿ.ಪಿ.ಐ.ಲಿಂಗನಗೌಡ ನೆಗಳೂರು, ಕ್ಷೇತ್ರಶಿಕ್ಷಣಾಧಿಕಾರಿ ಜಯಪ್ಪ, ಮಾನವಹಕ್ಕುಗಳ ಸೇವಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಸಿ.ಆರ್.ನಾಗೇಂದ್ರಪ್ಪ, ಗ್ರಾ.ಪಂ ಅಧ್ಯಕ್ಷೆ ರೇಣುಕಾಮೂರ್ತ್ಯಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮ, ಕರಿಯಪ್ಪ, ವಕೀಲ ರಾಜಪ್ಪ, ಮಲ್ಲಯ್ಯ, ಕೆ.ಜಿ.ಶೈಲೇಶ್ ಪಟೇಲ್, ಸುಧಾಕರ್, ಗಂಗಾಧರಯ್ಯ, ಕೆ.ಬಸವರಾಜ್, ಸುರೇಶ್, ನಂಜಯ್ಯ ಕುಮಾರ್ ಇದ್ದರು.