ಸಾರಾಂಶ
ಶಿವಮೊಗ್ಗ ಶಿವಶರಣರ ಭೂಮಿಯಾದ ಶಿವಮೊಗ್ಗದಲ್ಲಿ ರಾಜಯೋಗ ಭವನ ನಿರ್ಮಾಣ ಅರ್ಥಪೂರ್ಣವಾಗಿದೆ. ಸಮಾಜದಲ್ಲಿ ಸಮಾನತೆ ತರುವಲ್ಲಿ ಶರಣರ ಕೊಡುಗೆ ಅಪಾರ ಎಂದು ಡಾ. ಬಸವರಾಜ ರಾಜಋಷಿ ಹೇಳಿದರು. ವಾಜಪೇಯಿ ಬಡಾವಣೆಯಲ್ಲಿ ಬ್ರಹ್ಮಕುಮಾರಿಯ ವಿವಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ರಾಜಯೋಗ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಆಶೀರ್ವಚನ ನೀಡಿ, ನಮಃ ಶಿವಾಯ ಮಹಾಮಂತ್ರದ ಮಹತ್ವವನ್ನು ತಿಳಿಸಿದರು.
ರಾಜಯೋಗ ಭವನ ಉದ್ಘಾಟನಾ ಸಮಾರಂಭದಲ್ಲಿ ಡಾ.ಬಸವರಾಜ ರಾಜಋಷಿಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಶಿವಶರಣರ ಭೂಮಿಯಾದ ಶಿವಮೊಗ್ಗದಲ್ಲಿ ರಾಜಯೋಗ ಭವನ ನಿರ್ಮಾಣ ಅರ್ಥಪೂರ್ಣವಾಗಿದೆ. ಸಮಾಜದಲ್ಲಿ ಸಮಾನತೆ ತರುವಲ್ಲಿ ಶರಣರ ಕೊಡುಗೆ ಅಪಾರ ಎಂದು ಡಾ. ಬಸವರಾಜ ರಾಜಋಷಿ ಹೇಳಿದರು.ವಾಜಪೇಯಿ ಬಡಾವಣೆಯಲ್ಲಿ ಬ್ರಹ್ಮಕುಮಾರಿಯ ವಿವಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ರಾಜಯೋಗ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಆಶೀರ್ವಚನ ನೀಡಿ, ನಮಃ ಶಿವಾಯ ಮಹಾಮಂತ್ರದ ಮಹತ್ವವನ್ನು ತಿಳಿಸಿದರು.
ರಾಜಯೋಗ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಿದ ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಬ್ರಹ್ಮಕುಮಾರಿಯ ವಿವಿಯ ಪ್ರಧಾನ ಕೇಂದ್ರ ಇರುವ ಮೌಂಟ್ ಅಬುವಿಗೆ ಆಗಾಗ ಭೇಟಿ ನೀಡಿ, ಪರಮಾತ್ಮ ನ ಪ್ರೇರಣೆ ಪಡೆಯುತ್ತಿದ್ದರು. ಇದೀಗ ನಗರದಲ್ಲಿ ವಾಜಪೇಯಿ ಹೆಸರಿನ ಬಡಾವಣೆಯಲ್ಲಿಯೇ ಬ್ರಹ್ಮಕುಮಾರಿಯ ವಿವಿಯ ರಾಜಯೋಗ ಭವನ ನಿರ್ಮಾಣವಾಗುತ್ತಿರುವುದು ಸಂತಸವಾಗಿದೆ. ಇದು ಎಲ್ಲರಿಗೂ ಆತ್ಮಶಕ್ತಿ ಕೇಂದ್ರವಾಗಲಿ ಎಂದು ಆಶಿಸಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಜಗತ್ತಿನಲ್ಲಿ ಸಾಕಷ್ಟು ವಿವಿಗಳಿವೆ. ಆದರೆ ವರ್ತಮಾನದಲ್ಲಿ ಸಮಾಜಕ್ಕೆ ಅತಿ ಅತ್ಯವಶ್ಯವಾಗಿರುವ, ಉತ್ತಮ ಆಚಾರ, ವಿಚಾರ, ಸಂಸ್ಕಾರ ಕಲಿಸುವಂಥಹ ಅತ್ಯುನ್ನತವಾದ ವಿವಿ ಕೇಂದ್ರವೆಂದರೆ ಅದು ಈಶ್ವರೀಯ ವಿವಿಯಾಗಿದೆ ಎಂದರು.ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಹಣದಿಂದ ಶಾಂತಿ, ನೆಮ್ಮದಿ ಸಿಗುವುದಿಲ್ಲ. ಆದರೆ ಈ ಸಂಸ್ಥೆಯಲ್ಲಿ ಕಲಿಸುವ ರಾಜಯೋಗದಿಂದ ಇದು ಲಭಿಸುವುದು ಎಂದು ತಿಳಿಸಿದರು.
ಬಿ.ಕೆ. ಸ್ನೇಹಕ್ಕ ಅವರು ಈಶ್ವರೀಯ ಸಂದೇಶ ನೀಡಿ ಮೌಲ್ಯಾಧಾರಿತ ಸಮಾಜ ನಿರ್ಮಾಣ ಕಾರ್ಯ ಈ ಭವನದ ಮೂಲಕ ಆಗಲಿದೆ ಎಂದು ತಿಳಿಸಿದರು.ಮಹಾನಗರಪಾಲಿಕೆಯ ಮಾಜಿ ಸದಸ್ಯ ಎಚ್.ಸಿ.ಯೋಗೀಶ್, ರೋಟರಿ ಶರತ್‌ಚಂದ್ರ, ರಘು, ನಿಂಗಪ್ಪ ಉಪಸ್ಥಿತರಿದ್ದರು. ಧನಂಜಯ ಸ್ವಾಗತಿಸಿದರು. ಮಂಜಪ್ಪನವರು ವಂದಿಸಿದರು. ಶಿವಮೊಗ್ಗ ಸೇವಾಕೇಂದ್ರದ ಸಂಚಾಲಕಿಯಾದ ರಾಜಯೋಗಿನಿ ಬಿ.ಕೆ. ಅನಸೂಯಕ್ಕನವರು ಕಾರ್ಯಕ್ರಮ ನಿರೂಪಿಸಿದರು.